ದೇಶ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಗೆ ಅನಾರೋಗ್ಯ, ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಸಾಧ್ಯತೆ

Srinivasamurthy VN
ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಜೇಟ್ಲಿ ಶೀಘ್ರ ಕಿಡ್ಮಿ ಕಸಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಗುವ ಸಾಧ್ಯತೆ ಇದೆ.
65 ವರ್ಷದ ಅರುಣ್‌ ಜೇಟ್ಲಿ  ಕಿಡ್ನಿ ತೊಂದರೆಗೆ ಒಳಗಾಗಿದ್ದು ಅವರು ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾದೀತು ಎಂದು ಸಚಿವರ ನಿಕಟ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಜೇಟ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು ಅವರಿಗೆ ಮೂತ್ರ ಪಿಂಡದ ತೊಂದರೆ ಇದೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಪ್ರಸ್ತುತ ಜೇಟ್ಲಿ  ಅವರು ಆಸ್ಪತ್ರೆಗೆ ದಾಖಲಾಗಿಲ್ಲವಾದರೂ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಹೊರಗೆ ಹೋದರೆ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇರುವುದರಿಂದ ವೈದ್ಯರು ಮನೆಯಲ್ಲೇ ಇರುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. 
ಕಳೆದ ಸೋಮವಾರದಿಂದ ಜೇಟ್ಲಿ  ಅವರು ತಮ್ಮ ಸಚಿವಾಲಯಕ್ಕೆ ಹೋಗುತ್ತಿಲ್ಲ. ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ನೂತನವಾಗಿ ಚುನಾಯಿತರಾದರೂ ಪ್ರಮಾಣ ವಚನ ಸ್ವೀಕರಿಸಲು ಕೂಡ ಜೇಟ್ಲಿ ರಾಜ್ಯಸಭೆಗೆ ಹೋಗಿರಲಿಲ್ಲ. ತಮ್ಮ ನಿವಾಸದಲ್ಲೇ ಇದ್ದುಕೊಂಡು ಅವರು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜೇಟ್ಲಿ ಅವರು ಬೇರಿಯಾಟ್ರಿಕ್‌ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ದೀರ್ಘ‌ಕಾಲದಿಂದ ಮಧುಮೇಹಿಗಳಾಗಿರುವ ಜೇಟ್ಲಿ  ತೂಕ ಹೆಚ್ಚಿಸುವ ಸರ್ಜರಿಗೆ ಒಳಪಟ್ಟಿದ್ದರು. ಆ ಸರ್ಜರಿಯನ್ನು ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಆದರೆ ಅಲ್ಲಿ ಕೆಲವು ತೊಂದರೆಗಳು ಎದುರಾಗಿದ್ದ ಕಾರಣ ಅವರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಈಗ ಜೇಟ್ಲಿ  ಅವರನ್ನು ಅವರ ನಿವಾಸದಲ್ಲಿ ಏಮ್ಸ್‌ ವೈದ್ಯರು ನೋಡಿಕೊಳ್ಳುತ್ತಿದ್ದಾರೆ.
SCROLL FOR NEXT