ಸಾಂದರ್ಭಿಕ ಚಿತ್ರ 
ದೇಶ

ಮಧ್ಯ ಪ್ರದೇಶದಲ್ಲಿ ಮರ್ಯಾದೆ ಹತ್ಯೆ, ಮಹಿಳೆ ತಂದೆ ಬಂಧನ

ಮತ್ತೊಂದು ಜಾತಿಯ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ.....

ಬರ್ವಾನಿ(ಮಧ್ಯ ಪ್ರದೇಶ): ಮತ್ತೊಂದು ಜಾತಿಯ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮಹಿಳೆ ತಂದೆಯನ್ನು ಬಂಧಿಸಿರುವುದಾಗಿ ಗುರುವಾರ ಪೊಲೀಸರು ತಿಳಿಸಿದ್ದಾರೆ.
ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದರಿಂದ ಆಕ್ರೋಶಗೊಂಡ  ಪೋಷಕರ ಮಗಳನ್ನು ಹತ್ಯೆ ಮಾಡಿದ್ದು, ಈ ಪ್ರಕರಣ ಸಂಬಂಧ ತಂದೆಯನ್ನು ಬಂಧಿಸಲಾಗಿದೆ. ತಾಯಿ ಮತ್ತು ಮಹಿಳೆ ಸಹೋದರ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆಯಾದ ಮಹಿಳೆ ಸರ್ಲಾ ಮಲಿ ಎಂದು ಗುರುತಿಸಲಾಗಿದ್ದು, ಒಂದು ವರ್ಷಗಳ ಹಿಂದೆ ಅನ್ಯಜಾತಿಯ ಪಂಕಜ್ ಮಲಿ ಎಂಬುವವರನ್ನು ಮದುವೆಯಾಗಿದ್ದಳು. ಅಂದಿನಿಂದ ಮಗಳ ಮೇಲೆ ಪೋಷಕರು ಸಿಟ್ಟಾಗಿದ್ದರು ಎಂದು ಖೆಟಿಯಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜೇಂದ್ರ ಇಂಗಳ್ ಅವರು ತಿಳಿಸಿದ್ದಾರೆ.
ನಿನ್ನೆ ತಾಯಿ ಅನಾರೋಗ್ಯಕ್ಕಿಡಾಗಿದ್ದಾಳೆ ಎಂದು ಹೇಳಿ ಸರ್ಲಾ ಸಹೋದರ ಆಕೆಯನ್ನು ಖೆಟಿಯಾ ಪಟ್ಟಣದಲ್ಲಿರುವ ತಮ್ಮ ಮನೆಗೆ ಕರೆ ತಂದಿದ್ದ, ಇಂದು ಬೆಳಗ್ಗೆ ಕುಟುಂಬ ಸದಸ್ಯರು ಕಬ್ಬು ಕತ್ತರಿಸುವ ಕತ್ತಿಯಿಂದ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಇಂಗಳ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ತಂದೆ ದೇವಿದಾಸ್ ಕೊಲಿ(55)ಯನ್ನು ಬಂಧಿಸಲಾಗಿತ್ತು, ಆಕೆಯ ತಾಯಿ ತುಲಸಿಬಾಯಿ ಮತ್ತು ಸಹೋದರ ಹಿರಾಲಾಲ್ ನನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಲೂಚಿಸ್ತಾನದಲ್ಲಿ ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆ: 145 ಭಯೋತ್ಪಾದಕರ ಹತ್ಯೆಗೈದಿದ್ದೇವೆಂದ ಪಾಕಿಸ್ತಾನ, ಭಾರತ-ಆಫ್ಘನ್ ವಿರುದ್ಧ ಗಂಭೀರ ಆರೋಪ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಸಾವು ಪ್ರಕರಣ: SIT ತನಿಖೆ ಆರಂಭ

ಬೆಂಗಳೂರು: ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ BWSSB ಸಂಪ್ ನಲ್ಲಿ ಪತ್ತೆ!

ಕೇಂದ್ರ ಬಜೆಟ್ 2026: ಷೇರುಮಾರುಕಟ್ಟೆ 'ರಕ್ತಪಾತ', ಹೂಡಿಕೆದಾರರ 9.40 ಲಕ್ಷ ಕೋಟಿ ರೂ ನಷ್ಟ! ಕುಸಿತಕ್ಕೆ ಕಾರಣವೇನು?

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video

SCROLL FOR NEXT