ಐಎಸ್ಐ ಪ್ರೇರಿತ ಯುವಕನ ಬಂಧನ: ಸಂಭಾವ್ಯ ಒಂಟಿ ತೋಳ ದಾಳಿ ವಿಫಲಗೊಳಿಸಿದ ಪಂಜಾಬ್ ಪೊಲೀಸ್
ಚಂಡೀಗಢ: ಐಎಸ್ಐ ನಿಂದ ಸಹಾಯ ಪಡೆದು ಉಗ್ರಗಾಮಿಯಾಗಿದ್ದ ಸಿಖ್ ಯುವಕನನ್ನು ಪಂಜಾಬ್ ನ ಕೌಂಟರ್ ಇಂಟಲಿಜೆನ್ಸ್ ವಿಭಾಗದ ಪೊಲೀಸರು ಬಂಧಿಸಿದ್ದು, ರಾಜ್ಯದಲ್ಲಿ ನಡೆಯಬಹುದಾಗಿದ್ದ ಸಂಭಾವ್ಯ ಒಂಟಿ ತೋಳ ದಾಳಿಯನ್ನು ತಪ್ಪಿಸಿದ್ದಾರೆ.
ಇಂಜಿನಿಯರಿಂಗ್, ಎಂಬಿಎ ಪದವೀಧರನಾಗಿರುವ ಇಂದ್ರಜಿತ್ ಸಿಂಗ್ ಬಂಧಿತ ಯುವಕನಾಗಿದ್ದು ಫರೀದಾಬಾದ್ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ. ಎಸ್ಎಎಸ್ ನಗರದಲ್ಲಿ ಆತನನ್ನು ಬಂಧಿಸಲಾಗಿದ್ದು, ಸುಧಾರಿತ ಸ್ಫೋಟಕ ಸಾಧನಗಳು, ರಾಸಾಯನಿಕಗಳು, ಎಲೆಕ್ಟ್ರಾನಿಕ್ ರಿಮೋಟ್ ಕಂಟ್ರೋಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾನು ಐಎಸ್ಐ ಹ್ಯಾಂಡ್ಲರ್ ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಪ್ರಾಥಮಿಕ ಹಂತದ ವಿಚಾರಣೆಯ ವೇಳೆ ಇಂದ್ರಜಿತ್ ಸಿಂಗ್ ಹೇಳಿದ್ದು, ಪಂಜಾಬ್ ನಲ್ಲಿ ಬಾಂಬ್ ಸ್ಫೋಟಿಸುವ ಕೆಲಸ ವಹಿಸಲಾಗಿತ್ತು ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಜೆಸಿಬಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತನಗೆ ಫೇಸ್ ಬುಕ್ ಮೂಲಕ ಐಎಸ್ಐ ಅಧಿಕಾರಿಗಳು ಈ ಕೆಲಸ ವಹಿಸಿದ್ದರು, ಅಷ್ಟೇ ಅಲ್ಲದೇ ಸ್ಫೋಟಕಗಳನ್ನು ತಯಾರಿಸುವುದರ ಬಗ್ಗೆ ಡಿಐವೈ (ಡು ಇಟ್ ಯುವರ್ ಸೆಲ್ಫ್) ಕಿಟ್ ಮೂಲಕ ಕಲಿತುಕೊಂಡಿದ್ದಾಗಿ ತಿಳಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics