ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ
ಲಖನೌ; ವಿರೋಧ ಪಕ್ಷಳನ್ನು ಪ್ರಾಣಿಗಳಿಗೆ ಹೋಲಿಕೆ ಮಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಬಹುಜನ ಸಮಾಜ ಪಕ್ಷ ಶನಿವಾರ ತೀವ್ರವಾಗಿ ಕಿಡಿಕಾರಿದೆ.
ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿಯವರು, ಗೋರಖ್ಪುರ ಮತ್ತು ಫುಲ್ಪುರ್ ನಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಜನರು ಈಗಾಗಲೇ ಅಪಮಾನ ಮತ್ತು ಸಂಘಿ ಭಾಷೆ ಬಳಸುತ್ತಿರುವ ಬಿಜೆಪಿಯವರಿಗೆ ಪಾಠ ಕಲಿಸಿದ್ದಾರೆಂದು ಹೇಳಿದ್ದಾರೆ.
ತಮ್ಮ ಹೇಳಿಕೆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅನುಯಾಯಿ ಅಮಿತ್ ಶಾ ಅವರ ನಾಯಕತ್ವದಲ್ಲಿ ಬಿಜೆಪಿ ಪಕ್ಷ ನೆಲ ಕಚ್ಚಿದೆ ಎಂಬುದು ಸಾಬೀತಾಗಿದೆ. ಹೊಸಲು ಮತ್ತು ಅಸಮರ್ಪಕ ಭಾಷೆ ಮೂಲಕ ಬಿಜೆಪಿ ನವಭಾರತವನ್ನು ನಿರ್ಮಾಣ ಮಾಡಲಿದೆಯೇ?...ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಕ್ಕಿದು ಹೊಂದುವುದೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ತಮ್ಮ ದುರಂಹಕಾರ, ನಿರ್ಲಕ್ಷ್ಯದ ಮೂಲಕ ಟಿಡಿಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆಯನ್ನು ಎದುರಿಸಬೇಕಾಗಿ ಬಂದಿದೆ. ಸಂಸತ್ತಿನ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಲು ಅಸಮರ್ಪಕ ಹಾಗೂ ಅನೈತಿಕ ತಂತ್ರಗಳನ್ನು ಬಿಜೆಪಿ ಬಳಕೆ ಮಾಡಿದೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೆ, ಬ್ಯಾಂಕ್ ವಂಚನೆ, ಭ್ರಷ್ಟಾಚಾರ, ರೈತ ವಿರೋಧಿ, ಅಭಿವೃದ್ಧಿ ವಿರೋಧಿ ನೀತಿಗಳು ಬಹಿರಂಗಗೊಳ್ಳುತ್ತದೆ ಎಂದು ಈ ರೀತಿ ಮಾಡಿದ್ದಾರೆ. ಆಡಳಿತಾರೂಢ ಪಕ್ಷ ಬಜೆಟ್ ಅಧಿವೇಶ ನಡೆಯಲು ಬಿಡದೇ ಇರುವುದು ದುರಾದೃಷ್ಟಕರ ಸಂಗತಿ ಎಂದಿದ್ದಾರೆ.