ಭ್ರೂಣವಿರುವ ಚೀಲ, ಪೊಲೀಸ್ ಠಾಣೆ
ಸಾತ್ನಾ(ಮಧ್ಯ ಪ್ರದೇಶ): 20 ವರ್ಷದ ಅತ್ಯಾಚಾರ ಸಂತ್ರಸ್ತ ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಭ್ರೂಣವನ್ನು ಚೀಲದಲ್ಲಿರಿಸಿಕೊಂಡು ಸಾತ್ನಾ ಜಿಲ್ಲಾ ಪೊಲೀಸ್ ಅಧೀಕ್ಷಕರ ಚೇರಿಗೆ ಆಗಮಿಸಿದ ಆಘಾತಕಾರಿ ಘಟನೆ ನಡೆದಿದೆ.
ಕಳೆದ ಹಲವು ತಿಂಗಳಿಂದ ನಾಲ್ವರು ಕಾಮುಕರು ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಲ್ಲದೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಸಂಬಂಧ ಮಹಿಳೆ ನೀರಜ್ ಪಾಂಡೆ, ದೀರಜ್ ಪಾಂಡೆ, ಪ್ರೇಮ್ ಕುಮಾರ್, ರಾಜಕುಮಾರ್ ಮತ್ತು ನರ್ಸ್ ಸಪ್ನಾ ವಿರುದ್ಧ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾಳೆ.
ಏಳು ತಿಂಗಳುಗಳ ಹಿಂದೆ ನಾಲ್ವರು ಆರೋಪಿಗಳು ಚಾಕು ತೋರಿಸಿ ಬೆದರಿಸಿ ಒಮ್ಮೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ತನ್ನ ಮೇಲೆ ಸತತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಗರ್ಭಪಾತದ ಬಳಿಕ ಭ್ರೂಣವನ್ನು ಚೀಲದಲ್ಲಿ ಹಾಕಿ ತನಗೆ ನೀಡಿದ ನರ್ಸ್, ಅದನ್ನು ಎಸೆಯುವಂತೆ ಹೇಳಿದ್ದಳು. ಅಲ್ಲದೆ ಗರ್ಭಪಾತದ ಬಗ್ಗೆ ಯಾರಾಲ್ಲಾದರೂ ಬಾಯಿ ಬಿಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಆರೋಪಿಗಳು ಬೆದರಿಕೆ ಹಾಕಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಸಾತ್ನಾ ಪೊಲೀಸ್ ಅಧೀಕ್ಷಕ ವಿಡಿ ಪಾಂಡೆ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics