ದೇಶ

ತಪ್ಪುದಾರಿಗೆಳೆಯುವ ಉತ್ಪನ್ನ ಜಾಹೀರಾತುಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು: ಸರ್ಕಾರದ ಅಂಕಿಅಂಶ

Sumana Upadhyaya

ನವದೆಹಲಿ: ಜನರನ್ನು ಹಾದಿತಪ್ಪಿಸುವ ಜಾಹಿರಾತುಗಳೆಂದು ಬರುವ ದೂರುಗಳಲ್ಲಿ ಮೂರನೇ ಒಂದರಷ್ಟು ಆರೋಗ್ಯ ವಲಯಕ್ಕೆ ಸೇರಿದ್ದಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಆರೋಗ್ಯ ಸಚಿವಾಲಯದ ತಪ್ಪಿತಸ್ಥ ಜಾಹೀರಾತುಗಳ ವಿರುದ್ಧ ದೂರುಗಳು  ಪೋರ್ಟಲ್ ನಲ್ಲಿ ಮಾರ್ಚ್ 2015ರಿಂದ ಮಾರ್ಚ್ 2018ರವರೆಗೆ 6,820 ದೂರುಗಳು ದಾಖಲಾಗಿವೆ ಎಂದು ಅಂಕಿಅಂಶ ತಿಳಿಸಿವೆ.

ಸಚಿವಾಲಯದ ಅಧಿಕೃತ ಅಂಕಿಅಂಶ ಪ್ರಕಾರ, ಆರೋಗ್ಯ ವಲಯದಿಂದ ಹೆಚ್ಚು ಹಾದಿತಪ್ಪಿಸುವ ಜಾಹಿರಾತುಗಳು ಪ್ರಸಾರವಾದ ದೂರುಗಳು ಬಂದಿವೆ. ಜನರನ್ನು ಹಾದಿತಪ್ಪಿಸುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಹರ್ಬಲ್ ಔಷಧಗಳ ಮೂಲಕ ಡಯಾಬಿಟಿಸ್, ಕಿಡ್ನಿ ಕಲ್ಲು, ಅಲರ್ಜಿ ಮತ್ತು ಇತರ ಸಾಮಾನ್ಯ ಕಾಯಿಲೆಗಳನ್ನು ನಿವಾರಿಸಬಹುದು ಎಂಬ ಜಾಹಿರಾತು ಮೂಲಕ ಹಾದಿತಪ್ಪಿಸಲಾಗುತ್ತದೆ.

ತಲೆಕೂದಲಿನ ಎಣ್ಣೆ, ಸೌಂದರ್ಯ ಉತ್ಪನ್ನಗಳಿಗೆ ಸಂಬಂಧಪಟ್ಟ ದೂರುಗಳು ಸಾಮಾನ್ಯ. ತಲೆಕೂದಲಿನ ಎಣ್ಣೆಗಳು ಬೋಳುತಲೆಯನ್ನು ನಿವಾರಿಸುತ್ತದೆ ಎಂಬ ಜಾಹಿರಾತುಗಳು ಬರುತ್ತವೆ. ಇಲ್ಲಿಯವರೆಗೆ 2,070 ದೂರುಗಳು ದಾಖಲಾಗಿದ್ದು ಅವುಗಳಲ್ಲಿ 133 ತಿರಸ್ಕೃತಗೊಂಡಿವೆ, 799 ಬಗೆಹರಿಸಲಾಗಿದೆ, 445 ಜಾಹಿರಾತುಗಳು ಭಾರತೀಯ ಜಾಹಿರಾತು ಗುಣಮಟ್ಟದ ಮುಂದೆ ಪರಿಷ್ಕರಣೆಗೆ ಉಲ್ಲೇಖವಾಗಿದ್ದು 693 ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಉಲ್ಲೇಖಕ್ಕೆ ಬಂದಿವೆ. ತಡೆ ಮತ್ತು ಜಾರಿಯಲ್ಲಿನ ಕೊರತೆ ಜಾಹಿರಾತುಗಳು ಜನರನ್ನು ತಪ್ಪು ಹಾದಿಗೆಳೆಯಲು ಕಾರಣ ಎನ್ನುತ್ತಾರೆ ಗ್ರಾಹಕ ಹಕ್ಕುಗಳ ಕಾರ್ಯಕರ್ತರು.

SCROLL FOR NEXT