2015ನೇ ಯುಪಿಎಸ್'ಸಿ ಟಾಪರ್ ಟೀನಾ ದಾಬಿ ಮತ್ತು ಅದೇ ಬ್ಯಾಚ್'ನ ಎರಡನೇ ರ್ಯಾಂಕ್ ಪಡೆದ ಅತ್ತರ್ ಅಮಿರ್ ಉಲ್ ಶಫಿ
ನವದೆಹಲಿ: ಲವ್ ಜಿಹಾದ್ ಆರೋಪಗಳನ್ನು ಧಿಕ್ಕರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ
2015ನೇ ಯುಪಿಎಸ್'ಸಿ ಟಾಪರ್ ಟೀನಾ ದಾಬಿ ಮತ್ತು ಅದೇ ಬ್ಯಾಚ್'ನ ಎರಡನೇ ರ್ಯಾಂಕ್ ಪಡೆದ ಅತ್ತರ್ ಅಮಿರ್ ಉಲ್ ಶಫಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, 2015ನೇ ಯುಪಿಎಸ್'ಸಿ ಟಾಪರ್ ಗಳಾದ ಟೀನಾ ದಾಬಿ ಮತ್ತು ಅಮಿರ್ ಉಲ್ ಶಫಿಯವರಿಗೆ ವಿವಾಹದ ಶುಭಾಶಯಗಳು. ನಿಮ್ಮ ಪ್ರೀತಿ ಶಕ್ತಿ ಮತ್ತಷ್ಟು ಹೆಚ್ಚಲಿ. ಅಸಹಿಷ್ಣುತೆ ಹಾಗೂ ಕೋಮು ದ್ವೇಷ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಎಲ್ಲಾ ಭಾರತೀಯರಿಗೂ ನೀವು ಸ್ಫೂರ್ತಿಯಾಗಬಹುದು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಟೀನಾ ಹಾಗೂ ಅತ್ತರ್ ಅವರು ಶ್ರೀನಗರದ ಹೋಟೆಲ್ ವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
3 ವರ್ಷಗಳ ಹಿಂದೆ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು. ಈ ವಿಚಾರವನ್ನು ಟೀನಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದರು. ಇಬ್ಬರೂ ಬೇರೆ ಧರ್ಮದವರಾಗಿದ್ದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಎದುರಾಗಿತ್ತು. ಆದರೂ. ಎಲ್ಲಾ ಸವಾಲುಗಳನ್ನು ಎದುರಿಸಿದ್ದ ಜೋಡಿ ಕೊನೆಗೂ ವಿವಾಹವಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos