ಉನ್ನಾವೋ ಅತ್ಯಾಚಾರ ಪ್ರಕರಣ: ಪೊಲೀಸ್ ಕಸ್ಟಡಿಗೂ ಮುನ್ನ ಸಂತ್ರಸ್ತೆ ತಂದೆಗೆ ಯಾವುದೇ ಆಂತರಿಕ ಗಾಯಗಳಿರಲಿಲ್ಲ: ವರದಿ 
ದೇಶ

ಉನ್ನಾವೋ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ತಂದೆಗೆ ಪೊಲೀಸ್ ಕಸ್ಟಡಿಗೂ ಮುನ್ನ ಯಾವುದೇ ಗಾಯಗಳಾಗಿರಲಿಲ್ಲ: ವರದಿ

ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತಂದೆಯ ದೇಹದಲ್ಲಿ ಪೊಲೀಸ್ ಕಸ್ಟಡಿಗೂ ಮುನ್ನ ಯಾವುದೇ ರೀತಿಯ ಆಂತರಿಕ ಗಾಯಗಳಿರಲಿಲ್ಲ ಎಂದು ವರದಿಗಳು ತಿಳಿಸಿವೆ...

ಲಖನೌ: ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತಂದೆಯ ದೇಹದಲ್ಲಿ ಪೊಲೀಸ್ ಕಸ್ಟಡಿಗೂ ಮುನ್ನ ಯಾವುದೇ ರೀತಿಯ ಆಂತರಿಕ ಗಾಯಗಳಿರಲಿಲ್ಲ ಎಂದು ವರದಿಗಳು ತಿಳಿಸಿವೆ. 
ಪೊಲೀಸ್ ಕಸ್ಟಡಿಗೂ ಮುನ್ನ ಸಂತ್ರಸ್ತ ಯುವತಿಯ ತಂದೆಗೆ ಅಲ್ಟ್ರಾಸೌಂಡ್ ಸ್ಕಾನಿಂಗ್'ಗೆ ಒಳಪಡಿಸಲಾಗಿದೆ. ಈ ವೇಳೆ ಅವರಲ್ಲಿ ಯಾವುದೇ ರೀತಿಯಲ ಆಂತರಿಕ ಗಾಯಗಳಿರಲಿಲ್ಲ ಎಂಬುದು ವರದಿಯಲ್ಲಿ ತಿಳಿಸಿದೆ. 
ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಇದಕ್ಕೆ ತದ್ವಿರುದ್ಧವಾಗಿ ವರದಿಗಳನ್ನು ನೀಡಿದ್ದಾರೆ. ಆಘಾತ, ರಕ್ತದ ಸೋಕು ಹಾಗೂ ಬ್ಯಾಕ್ಟಿರಿಯಾ ಸೋಂಕಿನಿಂದ ಸಾವನ್ನಪ್ಪಿದ್ದಾರೆಂದು ತಿಳಿಸಲಾಗಿದೆ. ಎರಡೂ ವರದಿಗಳಿಂದಾಗಿ ಇದೀಗ ಪ್ರಕರಣ ಸಂಬಂಧ ಸಾಕಷ್ಟು ಅನುಮಾನಗಳು ಮೂಡತೊಡಗಿವೆ.
 ಒಂದೆಡೆ ಅಧಿಕಾರಿಗಳು ಆರೋಗ್ಯ ಸಮಸ್ಯೆಗಳಿಂದಾಗಿ ಸಂತ್ರಸ್ತೆ ತಂದೆ ಮೃತಪಟ್ಟಿದ್ದಾರೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕುಟುಂಬಸ್ಥರು ಪೊಲೀಸರೇ ಹತ್ಯೆ ಮಾಡಿದ್ದಾರೆಂದು ಆರೋಪ ಮಾಡುತ್ತಿದ್ದಾರೆ. 
ಪ್ರಸ್ತುತ ಪ್ರಕರಣವನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶಗಳು ಬಹಿರಂಗಗೊಳ್ಳಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಶಾಸಕರಿಗೆ 4 ವಿಐಪಿ ಟಿಕೆಟ್ ಖಾತ್ರಿಗೆ ಸ್ಪೀಕರ್ ಯುಟಿ ಖಾದರ್ ನಿರ್ದೇಶನ!

Airbnb ಮೂಲಕ ಪೆಂಟ್‌ಹೌಸ್ ಬಾಡಿಗೆ ವಿವಾದ: ಜನರ ಮೇಲೆ ಕಾರು ಹತ್ತಿಸಿದ ತಂದೆ-ಮಗ; ಮಹಿಳಾ ಟೆಕ್ಕಿ ಸಾವು, ಭೀಕರ ದೃಶ್ಯ!

ನನ್ನ ಬಿಡಪ್ಪ, ನಿನಗೆ ತಾಕತ್ತಿದ್ದರೆ ಮೋದಿಗೆ ಥೂ ಅನ್ನು ನೋಡೋಣ: ಸುನೀಲ್ ಕುಮಾರ್‌ಗೆ ಸಿದ್ದರಾಮಯ್ಯ ಸವಾಲು, Video!

ಹಾರ್ಮುಜ್ ಜಲಸಂಧಿಯನ್ನು ಮುಚ್ಚಿಸಿದ್ದ ಇರಾನ್‌ನ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾನನ್ನು ಹೊಡೆದುರುಳಿಸಿದ ಇಸ್ರೇಲ್!

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ, Muslim ಶಾಸಕರ ಮನವೊಲಿಕೆಗೂ ಜಗ್ಗದ ಸಾದಿಕ್ ಪೈಲ್ವಾನ್!

SCROLL FOR NEXT