ಮುಂಬೈ: ಐಪಿಎಲ್ ಪಂದ್ಯ ವೀಕ್ಷಿಸಲು ತಾಯಿ ಬಿಡಲಿಲ್ಲ ಎಂದು ನೇಣಿಗೆ ಶರಣಾದ ಬಾಲಕ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ವೀಕ್ಷಿಸಲು ತಾಯಿ ಬಿಡಲಿಲ್ಲ ಎಂದು ಕೋಪಗೊಂಡ 18 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ...
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ವೀಕ್ಷಿಸಲು ತಾಯಿ ಬಿಡಲಿಲ್ಲ ಎಂದು ಕೋಪಗೊಂಡ 18 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.
18 ವರ್ಷದ ನೀಲೇಶ್ ಗುಪ್ತಾ ಮನೆಯಲ್ಲಿ ಐಪಿಎಲ್ ಮ್ಯಾಚ್ ನೋಡುತ್ತಿದ್ದಾಗ ತಾಯಿ ಹೊರಗಡೆ ಇಟ್ಟಿರುವ ನೀರಿನ ಟ್ಯಾಕ್ ತಂಬಿದೆಯಾ ನೋಡು ಎಂದು ಹೇಳಿದ್ದಾರೆ. ಆದರೆ ಪಂದ್ಯ ನೋಡುತ್ತಿದ್ದ ನೀಲೇಶ್ ಗೆ ಇದು ಕೇಳಿಸಲಿಲ್ಲ. ಇದರಿಂದ ಆಕ್ರೋಶಗೊಂಡ ತಾಯಿ ಟಿವಿ ಸ್ವಿಚ್ ಆಫ್ ಮಾಡಿ ತಾವೇ ನೀರಿನ ಟ್ಯಾಂಕ್ ಬಳಿ ಹೋಗಿದ್ದಾರೆ.
ನಂತರ ಮನೆ ಹೋಳ ಹೋಗಲು ಬಂದಾಗ ಮನೆಯ ಮುಂಬಾಗಿಲು ಲಾಕ್ ಆಗಿರುತ್ತದೆ. ಎಷ್ಟು ಕೂಗಿಕೊಂಡರು ಮಗನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ನೆರೆಮನೆಯವರನ್ನು ಕರೆದಿದ್ದಾರೆ.
ಎಲ್ಲಾ ಸೇರಿ ಮನೆಯ ಬಾಗಿಲನ್ನು ಮುರಿದು ಒಳಗೆ ಬಂದು ನೋಡಿದಾಗ ನೀಲೇಶ್ ಹಾಲ್ ನಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.