ರಾಬ್ಡಿದೇವಿ 
ದೇಶ

ಯಾವುದೇ ಅಹಿತಕರ ಘಟನೆ ನಡೆದರೆ ಗೃಹ ಸಚಿವಾಲಯವೇ ನೇರ ಹೊಣೆ: ರಾಬ್ಡಿ ದೇವಿ

ಕುಟುಂಬದಲ್ಲಿ ಏನಾದರೂ ಅಹಿತರ ಘಟನೆ ನಡೆದರೆ ಗೃಹ ಸಚಿವಾಲಯವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ರಾಬ್ಡಿದೇವಿ ಹೇಳಿದ್ದಾರೆ.

ಪಾಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿಗೆ ನೀಡಿದ್ದ ಭದ್ರತಾ ಸಿಬ್ಬಂದಿಯನ್ನು ಸರ್ಕಾರ ಹಿಂತೆಗೆದುಕೊಂಡಿದ್ದು, ಆಕೆಯ ಕುಟುಂಬದಲ್ಲಿ ಏನಾದರೂ ಅಹಿತರ ಘಟನೆ ನಡೆದರೆ ಗೃಹ ಸಚಿವಾಲಯವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ರಾಬ್ಡಿದೇವಿ ಹೇಳಿದ್ದಾರೆ.

ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪತ್ನಿಯಾಗಿರುವ ರಾಬ್ಡಿದೇವಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು,ಯಾವುದೇ ನೋಟಿಸ್ ನೀಡದೆ ತಮ್ಮ ನಿವಾಸದಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗಿದೆ . ತಮ್ಮ ಕುಟುಂಬ ಹಾಗೂ ನಿವಾಸದ ಸುರಕ್ಷತೆಯಲ್ಲಿ ರಾಜೀ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಮೇವು ಹಗರಣದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದ ನಂತರ   ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ರಾಜ್ಯಸರ್ಕಾರ ಆದೇಶ ಮಾಡಿದ್ದರೂ ರಾಬ್ಡಿ ಮತ್ತು ಆಕೆಯ ಕುಟುಂಬಕ್ಕೆ ನೀಡಿದ್ದ ಭದ್ರತಾ ಸಿಬ್ಬಂದಿಯನ್ನು ವಜಾ ಮಾಡಿರಲಿಲ್ಲ.

ಇದೀಗ ತಮ್ಮಗೆ ನೀಡಿದ ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆದರೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರೇ ನೇರ ಹೊಣೆಯಾಗಿರುತ್ತಾರೆ ಎಂದು ರಾಬ್ಡಿದೇವಿ ಹೇಳಿದ್ದಾರೆ.

 ರಾಬ್ಡಿದೇವಿ ನಿವಾಸಕ್ಕೆ ಒದಗಿಸಿದ ಭದ್ರತಾ ಸಿಬ್ಬಂದಿಯನ್ನು ವಜಾಗೊಳಿಸುವ ಮೂಲಕ ಪಿತೂರಿ ನಡೆಸಲಾಗುತ್ತಿದೆ .ಮುಖ್ಯಮಂತ್ರಿ ನಿತೀಶ್ ಕುಮಾರ್,  ಸುಶೀಲ್ ಮೋದಿ ಹಾಗೂ ಸರ್ಕಾರದಿಂದ ಪಿತೂರಿ ನಡೆಸಲಾಗಿದೆ ಎಂದು ರಾಬ್ಡಿದೇವಿ ಆರೋಪಿಸಿದ್ದಾರೆ.

ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿದ್ದು, ಪ್ರತಿದಿನ ಸಾಯುತ್ತಿದ್ದಾರೆ. ಕಾಯಿಲೆಯಿಂದ ಸಾಯುತ್ತಿದ್ದೀರಾ ಅಥವಾ ಔಷಧಿ ಬಳಸುವುದರಿಂದ ಸಾಯುತ್ತಿದ್ದಾರೆ ಎಂಬ ಬಗ್ಗೆ ಗೊತ್ತಿಲ್ಲ. ಅವರಿಗೆ ಮಧುಮೇಹ ಜಾಸ್ತಿಯಾಗಿದೆ, ಅವರನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಸರ್ಕಾರ ಹೇಳಿದ್ದರೆ ,ಅದನ್ನು ಮಾಡಲು ಸಿದ್ಧವಿರುವುದಾಗಿ  ಸುದ್ದಿಸಂಸ್ಥೆಯೊಂದಕ್ಕೆ ರಾಬ್ಡಿದೇವಿ ಹೇಳಿದ್ದಾರೆ.

ಪಾಟ್ನಾದಲ್ಲಿನ ರಾಬ್ಡಿದೇವಿ ನಿವಾಸದ ಭದ್ರತೆಗೆ ನಿಯೋಜಿಸಲಾಗಿದ್ದ 32 ಬಿಹಾರಿ ಮಿಲಿಟರಿ ಪೊಲೀಸರನ್ನು ಬಿಹಾರ  ಸರ್ಕಾರ ವಜಾಪಡಿಸಿದೆ. ನಿನ್ನೆ ರಾತ್ರಿ ತಮ್ಮೆಲ್ಲಾ ವಸ್ತುಗಳನ್ನು ಗಟ್ಟುಮೂಟ್ಟೆ ಕಟ್ಟಿಕೊಂಡು ಭದ್ರತಾ ಸಿಬ್ಬಂದಿಗಳು ಜಾಗ ಖಾಲಿ ಮಾಡಿದ್ದಾರೆ.



Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

SCROLL FOR NEXT