ಪಕ್ಷದ ಉಪವಾಸ ಸತ್ಯಾಗ್ರಹ ದಿನದಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ! 
ದೇಶ

ಪಕ್ಷದ ಉಪವಾಸ ಸತ್ಯಾಗ್ರಹ: ಗೋಡಂಬಿ ತಿಂದು ಜ್ಯೂಸ್ ಕುಡಿದ ಬಿಜೆಪಿ ನಾಯಕ

ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತಿನ ಬಜೆಜ್ ಅಧಿವೇಶನದ ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಬಿಜೆಪಿ ದೇಶದಾದ್ಯಂತ ಉಪಸವಾಸ ಸತ್ಯಾಗ್ರಹ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪಕ್ಷದ ಎಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕೆಂದು...

ನವದೆಹಲಿ: ವಿರೋಧ ಪಕ್ಷಗಳ ಗದ್ದಲಕ್ಕೆ ಸಂಸತ್ತಿನ ಬಜೆಜ್ ಅಧಿವೇಶನದ ಕಲಾಪ ಬಲಿಯಾದ ಹಿನ್ನೆಲೆಯಲ್ಲಿ ಬಿಜೆಪಿ  ದೇಶದಾದ್ಯಂತ ಉಪಸವಾಸ ಸತ್ಯಾಗ್ರಹ ನಡೆಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಪಕ್ಷದ ಎಲ್ಲಾ ನಾಯಕರು ಸತ್ಯಾಗ್ರಹದಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದ್ದರೂ, ಬಿಜೆಪಿ ನಾಯಕರೊಬ್ಬರು ಜ್ಯೂಸ್ ಹಾಗೂ ಒಣ ಹಣ್ಣುಗಳನ್ನು ತಿಂದಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಬಿಜೆಪಿ ನಾಯರ ಹರಕ್ ಸಿಂಗ್ ರಾವತ್ ಅವರು ಜ್ಯೂಸ್ ಹಾಗೂ ಒಣಹಣ್ಣುಗಳನ್ನು ತಿಂದಿದ್ದು, ತಮ್ಮ ತಪ್ಪನ್ನು ರಾವತ್ ಅವರು ಒಪ್ಪಿಕೊಂಡಿದ್ದಾರೆ. 
ಮೋದಿಯವರು ನೀಡಿದ್ದ ಸೂಚನೆ ಬಗ್ಗೆ ಮಾಹಿತಿ ಅರಿಯದ ಹರಕ್ ಸಿಂಗ್ ರಾವತ್ ಅವರು, ಜ್ಯೂಸ್ ಹಾಗೂ ಒಣಹಣ್ಣುಗಳನ್ನು ತಿಂದಿದ್ದಾರೆ. ಪಕ್ಷದ ಎಲ್ಲಾ ನಾಯಕರು ಉಪವಾಸ ಮಾಡಿದ್ದಾರೆ. ಆದರೆ, ತಿಳಿಯದೆಯೇ ನಾನು ಕಾರ್ಯಕ್ರಮದಲ್ಲಿ ಗೋಡಂಬಿಗಳನ್ನು ತಿಂದುಬಿಟ್ಟೆ ಎಂದು ಹೇಳಿದ್ದಾರೆ. 
ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಕೆಲ ದಿನಗಳ ಹಿಂದಷ್ಟೇ ರಾಜಧಾನಿ ದೆಹಲಿಯ ರಾಜ್'ಘಾಟ್ ನಲ್ಲಿ ಕಾಂಗ್ರೆಸ್ ನಾಯಕರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರೊಬ್ಬರು ರೆಸ್ಟೋರೆಂಟ್ ವೊಂದರಲ್ಲಿ ಪೂರಿ ಹಾಗೂ ಸಾಗು ತಿನ್ನುತ್ತಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದಕ್ಕೆ ಬಿಜೆಪಿ ಕೂಡ ವ್ಯಂಗ್ಯವಾಡಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT