ನವದೆಹಲಿ: ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಪ್ರಯಾಣ ದರ 250-3000 ರೂಪಾಯಿಗಳ ನಡುವೆ ಇರಲಿದೆ.
ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣ ದರ 250-3000 ರೂಪಾಯಿಗಳ ನಡುವೆ ಇರಲಿದೆ ಎಂದು ಹೇಳಿದ್ದಾರೆ. ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮುಂಬೈ-ಅಹಮದಾಬಾದ್ ಪ್ರಯಾಣ ದರ 3,000 ಇರಲಿದ್ದು, ಬಂಡಾ-ಕುರ್ಲಾ ಕಾಂಪ್ಲೆಕ್ಸ್- ಥಾಣೆ ನಡುವಿನ ಪ್ರಯಾಣ ದರ 250 ರೂಪಾಯಿಗಳಿರಲಿವೆ ಎಂದು ಹೇಳಿದ್ದಾರೆ.
ಈಗಿನ ಲೆಕ್ಕಾಚಾರದ ಪ್ರಕಾರ ಕನಿಷ್ಠ ಪ್ರಯಾಣ ದರ 250 ರೂಪಾಯಿ ಇರಲಿದ್ದರೆ, ಗರಿಷ್ಠ 3000 ರೂಪಾಯಿಗಳು ಇರಲಿವೆ ಎಂದು ಅಂದಾಜಿಸಲಾಗಿದೆ.