ನವದೆಹಲಿ: 2017-2018ರ ಅವಧಿಯಲ್ಲಿ ಭಾರತೀಯ ರೈಲ್ವೆ ಉತ್ತಮ ಸುರಕ್ಷತಾ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದು ಕಳೆದ ಐದು ದಶಕಗಳಲ್ಲಿಯೇ ಅತ್ಯುತ್ತಮ ಸಾಧನೆಯಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಮಾ.30ರವರೆಗಿನ ದಾಖಲೆಯಂತೆ ಒಟ್ಟು 73 ರೈಲು ಅಪಘಾತಗಳ ವರದಿಯಾಗಿದೆ.ಹಿಂದಿನ ವರ್ಷಕ್ಕೆ ಹೋಲಿಸಿದಾಗ (104 ಅಪಘಾತಗಳು) ಇದು ಕಳೆದ 57 ವರ್ಷಗಳಲ್ಲಿ ಅತಿ ಕಡಿಮೆ ಅಪಘಾತ ಪ್ರಮಾಣವಾಗಿದೆ.
ರೈಲ್ವೆ ಹಳಿಗಳ ನವೀಕರನಗೊಂಡಿರುವುದೇ ಅಪಘಾತದ ಸಂಖ್ಯೆಯಲ್ಲಿ ಇಳಿಕೆಯಾಗಲು ಕಾರಣ ಎಂನ್ನಲಾಗಿದೆ. 2017-2018 ರಲ್ಲಿ 4,405 ಕಿಮೀ ರೈಲು ಹಳಿಗಳನ್ನು ನವೀಕರಣಗೊಳಿಸಲಾಗಿತ್ತು. ರೈಲ್ವೆ ಹಳಿ ನವೀಕರಣದಲ್ಲಿ ಇದು ಅತ್ಯುನ್ನತ ಪ್ರಗತಿಯಾಗಿದೆ. ವಾರ್ಷಿಕ 4,400 ಕಿ.ಮೀ. ಗೆ ಮೀರಿ ನವೀಕರಣ ಕಾಮಗಾರಿ ನಡೆದಿರುವುದು ಉತ್ತಮ ಬೆಳವಣಿಗೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದಕ್ಕೂ ಮುನ್ನ 2004-2005ರಲ್ಲಿ 4,175 ಕಿ.ಮೀ ರೈಲ್ವೆ ಹಳಿ ನವೀಕರಣ ಗೊಳಿಸಲಾಗಿತ್ತು. 17 ಸಾವಿರ ಕೋಟಿ ರೂ. ನಿಧಿಯನ್ನು ಬಳಸಿ ಈ ಕಾಮಗಾರಿ ನಡೆಸಲಾಗಿತ್ತು.
1960-61ರಲ್ಲಿ, ಒಟ್ಟಾರೆಯಾಗಿ ರೈಲುಗಳು ಕೇವಲ 388.1 ಮಿಲಿಯನ್ ರೈಲು ಕಿ.ಮೀ. ಸಂಚರಿಸಿದ್ದರೆ 2017-2018ರಲ್ಲಿ 1170.7 ಮಿಲಿಯನ್ ರೈಲು ಕಿಮೀ ಸಂಚಾರ ನಡೆಸಿವೆ.
ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 2017-2018ರಲ್ಲಿ ಹೆಚ್ಚುವರಿ 74 ಮಿಲಿಯನ್ ರೈಲು ಕಿ.ಮೀ.ಪ್ರಯಾಣಿಸಿದರೂ ಸಹ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ./
ರೈಲು ಅಪಘಾತಗಳ ದಶ ವಾರ್ಷಿಕ ಅಂಕಿ ಅಂಶಗಳು ಹೀಗಿದೆ- 1960-61ರಲ್ಲಿ 2131, 1970-71ರಲ್ಲಿ 840, 1980-81ರಲ್ಲಿ 1,013, 1990-91ರಲ್ಲಿ 532, 2010-11ರಲ್ಲಿ 141 ಅಪಘಾತಗಳಾದ ವರದಿಯಾಗಿದೆ.
ಹಾಗೆಯೇ ವರ್ಷದಿಂದ ವರ್ಷಕ್ಕೆ ರೈಲು ಅಪಘಾತದಿಂದ ಸಾವನ್ನಪ್ಪಿರುವ ಜನರ ಪ್ರಮಣದಲ್ಲಿ ಸಹ ಇಳಿಕೆಯಾಗಿದ್ದು 2016-17ರಲ್ಲಿ, ರೈಲು ಅಪಘಾತಗಳಲ್ಲಿ 607 ಜನರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಆದರೆ 2017-2018ರಲ್ಲಿ, ಈ ಸಂಖ್ಯೆಯು 254ರಷ್ಟಕ್ಕೆ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics