ದೇಶ

ಛತ್ತೀಸ್ ಗಢ: ಆಯುಷ್ ಮಾನ್ ಭಾರತ ಯೋಜನೆಯಡಿ ಮೊದಲ ಆರೋಗ್ಯ ಕೇಂದ್ರಕ್ಕೆ ಪ್ರಧಾನಿ ಚಾಲನೆ

Lingaraj Badiger
ಜಂಗಲ: ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ ಗಢದ ಜಂಗಲದಲ್ಲಿ ತಮ್ಮ ಬಹು ನಿರೀಕ್ಷಿತ ಆಯುಷ್ ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ(ಎಬಿ-ಎನ್ ಎಚ್ ಪಿಎಂ) ಅಡಿ ಶನಿವಾರ ಮೊದಲ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ.
ಇದೇ ವೇಳೆ ಛತ್ತೀಸ್ ಗಢದ ಬುಡಕಟ್ಟು ಪ್ರದೇಶದ ಏಳು ಜಿಲ್ಲೆಗಳಿಗೆ ಇಂಟರ್ ನೆಟ್ ಸೌಲಭ್ಯ ಕಲ್ಪಿಸುವ ಬಸ್ತಾರ್ ಇಂಟರ್ ನೆಟ್ ಯೋಜನೆಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ.
ಬಿಜಾಪುರ್, ನಾರಾಯಣಪುರ್ ಬಸ್ತಾರ್ ಕಂಕೇರ್, ಕೊಂಡಗಾಂವ್, ಸುಕ್ಮಾ ಮತ್ತು ದಂಟೆವಾಡ್ ಜಿಲ್ಲೆಗಳಿಗೆ ಫೈಬರ್ ಆಪ್ಟಿಕ್ ನೆಟ್ ವರ್ಕ್ ಮೂಲಕ ಇಂಟ್ ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಮೋದಿ ಅವರು ಬುಡಕಟ್ಟು ಜಿಲ್ಲೆ ಬಿಜಾಪುರಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದು, ಗುಡುಮ್ ಮತ್ತು ಭನುಪ್ರಾತಪುರ್ ನಡುವಿನ ನೂತನ ರೈಲು ಮಾರ್ಗವನ್ನೂ ಉದ್ಘಾಟಿಸಿದರು.
ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಛತ್ತೀಸ್ ಗಢಕ್ಕೆ ಪ್ರಧಾನಿ ಮೋದಿ ಅವರು ಇಂದು ನಾಲ್ಕನೆ ಬಾರಿ ಭೇಟಿ ನೀಡಿದ್ದಾರೆ.
SCROLL FOR NEXT