ನವದೆಹಲಿ: ಕಾಂಗ್ರೆಸ್ ಪಕ್ಷದ ಚಿನ್ಹೆ - ಹಸ್ತದ ಗುರುತನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಚುನಾವಣಾ ಆಯೋಗವು ಇದೇ ಏ.18ರಂದು ಕೈಗೆತ್ತಿಕೊಳ್ಳಲಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ವಕ್ತಾರ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.ಏಪ್ರಿಲ್ 18ರ ಮಧ್ಯಾಹ್ನ 3 ಗಂಟೆಗೆ ಉಪ ಚುನಾವಣಾ ಆಯುಕ್ತ ಚಂದ್ರ ಭೂಷಣ್ ಕುಮಾರ್ ಅವರ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದೆ.
ಅಶ್ವಿನಿ ಕುಮಾರ್ ಅವರು ಈ ಜನವರಿಯಲ್ಲಿ ಆಯೋಗಕ್ಕೆ ಪತ್ರ ಬರೆದಿದ್ದು ಸಂವಿಧಾನದ 324ನೇ ವಿಧಿಯು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸ್ವಾತಂತ್ರ್ಯ ಹಾಗೂ ಅಧಿಕಾರ ನೀಡಿದೆ.ಎಂದಿದ್ದಾರೆ.
ಇದೇ ಪತ್ರದಲ್ಲಿ ಅಶ್ವಿನಿ ಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಹಸ್ತದ ಚಿನ್ಹೆಯು ಮಾನವ ಶರೀರದ ಭಾಗ. ಸಂವಿಧಾನದ ನಿಯಮಾನುಸಾರ ಮಾನವ ದೇಹದ ಅಂಗವೊಂದನ್ನು ಪಕ್ಷದ ಚಿನ್ಹೆಯಾಗಿಸುವಂತಿಲ್ಲ. ಚುನಾವಣಾ ಸಂಕೇತವನ್ನು ಕಾಂಗ್ರೆಸ್ ಪಕ್ಷದವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಮತದಾನಕ್ಕೆ 48 ಗಂಟೆಗಳ.ಮುನ್ನ ಪ್ರಚಾರಕಾರ್ಯ ಅಮ್ತ್ಯವಾಗಲಿದೆ.1951 ರ ಜನಾಭಿಪ್ರಾಯ ಕಾಯ್ದೆ 1951ರ ಸೆ ಕ್ಷನ್ 130ರ ಅನುಸಾರ ಮತದಾನ ದಿನದಂದು ಮತಗಟ್ಟೆಯ 100 ಮೀಟರ್ ಆವರಣದೊಳಗೆ ಯಾವ ಚುನಾವಣಾ ಸಂಕೇತಗಳನ್ನೂ ಪ್ರದರ್ಶಿಸಬಾರದು. ಹೀಗಿದ್ದರೂ ಕಾಂಗ್ರೆಸ್ ಪಕ್ಷ ಮಾತ್ರ ಪ್ರಚಾರ ಅಂತ್ಯವಾದ ಬಳಿಕವೂ ಚಿನ್ಹೆಯನ್ನು ಬಳಸಿಕೊಳ್ಳುವ ಮೂಲಕ ಅದನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮತಗಟ್ಟೆಯ ಬಳಿ ಪಕ್ಷದ ಏಜೆಂಟರು ಹಾಜರಿದ್ದು ಮತದಾರರಿಗೆ ತಮ್ಮ ಹಸ್ತ ಪ್ರದರ್ಶಿಸುವ ಮೂಲಕ ಪಕ್ಷದ ಚಿನ್ಹೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅವರು ಆ ಮೂಕ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಚೋದಿಸುತ್ತಿದ್ದಾರೆ.ಈ ಮೂಲಕ .1951 ರ ಜನಾಭಿಪ್ರಾಯ ಕಾಯ್ದೆ 1951ರ ಸೆಕ್ಷನ್ 130ರ ಉಲ್ಲಂಘನೆಯಾಗುತ್ತಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಚುನಾವಣಾ ಸಂಕೇತವನ್ನು ರದ್ದುಗೊಳಿಸಲು ಆಯೋಗ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಅಶ್ವಿನಿ ಕುಮಾರ್ ವಿನಂತಿಸಿದ್ದಾರೆ.