ದೇಶ

ಹೊಸ ಟಿವಿ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸಲು ಮಾಹಿತ, ಪ್ರಸಾರ ಸಚಿವಾಲಯ ಪ್ರಸ್ತಾವನೆ

Lingaraj Badiger
ನವದೆಹಲಿ: ಕಳೆದ ಕೇಬಲ್‌ ಟಿ.ವಿ ಡಿಜಿಟಲೀಕರಣದ ಭಾಗವಾಗಿ ಸೆಟ್‌ ಟಾಪ್‌ ಬಾಕ್ಸ್‌ ಕಡ್ಡಾಯಗೊಳಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈಗ ಹೊಸ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಪ್ರತಿ ಚಾನೆಲ್ ನ ವೀಕ್ಷಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಈ ಚಿಪ್ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸೆಟ್ ಟಾಪ್ ಬಾಕ್ಸ್ ಗಳಿಗೆ ಈ ಚಿಪ್ ಅಳವಡಿಸುವುದರಿಂದ ಜಾಹೀರಾತುದಾರರಿಗೆ ಮತ್ತು ಡಿಎವಿಪಿ ಜಾಹೀರಾತಿನ ಮೇಲೆ ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟ್ರಾಯ್ ಗೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ ಹೊಸ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸುವಂತೆ ಡಿಟಿಎಚ್ ನಿರ್ವಾಹಕರಿಗೆ ಸೂಚಿಸಿದೆ.
ಈ ಚಿಪ್ ನಿಂದಾಗಿ ಪ್ರತಿ ಚಾನಲ್ ವೀಕ್ಷಕರ ಸಂಖ್ಯೆ ಮತ್ತು ಅವಧಿಯ ಕುರಿತು ನಿಖರ ಮಾಹಿತಿ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT