ಪ್ರಧಾನಿ ನರೇಂದ್ರ ಮೋದಿ 
ದೇಶ

ಇದು ನಮ್ಮ 'ಕರಾಳ ಸಮಯ': ಪ್ರಧಾನಿ ಮೋದಿಗೆ ನಿವೃತ್ತ ಅಧಿಕಾರಿಗಳ ಪತ್ರ

ಕಥುವಾ, ಉನ್ನಾವೊ ಅತ್ಯಾಚಾರ ಪ್ರಕರಣದ ನಂತರ 49 ವರ್ಷದ ಸರ್ಕಾರಿ ನಿವೃತ್ತ ಅಧಿಕಾರಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದು,

ನವದೆಹಲಿ: ಕಥುವಾ, ಉನ್ನಾವೊ ಅತ್ಯಾಚಾರ ಪ್ರಕರಣದ ನಂತರ 49 ವರ್ಷದ ಸರ್ಕಾರಿ ನಿವೃತ್ತ  ಅಧಿಕಾರಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದು, ಭಯಾನಕ ವ್ಯವಹಾರಗಳ ಸ್ಥಿತಿ ಎಂದು ಆರೋಪಿಸಿದ್ದಾರೆ.

8 ವರ್ಷದ ಬಾಲಕಿ ಮೇಲೆ ಅನಾಗರಿಕವಾಗಿ ಕ್ರೂರವಾಗಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದನ್ನು ನೋಡಿದ್ದರೆ ಅಪ್ರಾಮಾಣಿಕತೆಯ ಆಳದಲ್ಲಿ ಮುಳುಗಿರುವುದನ್ನು ತೋರಿಸುತ್ತದೆ ಎಂದು ಪತ್ರದಲ್ಲಿ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಸ್ವಾತಂತ್ರ್ಯ ನಂತರ ಇದು ನಮ್ಮ ಕರಾಳ ಸಮಯವಾಗಿದ್ದು, ಸರ್ಕಾರದ ಹೊಣೆಯನ್ನು ಕಂಡುಹಿಡಿಯಬೇಕಾಗಿದೆ, ನಮ್ಮ ರಾಜಕೀಯ ಪಕ್ಷಗಳ ನಾಯಕರು ಅಸಮರ್ಪಕ ಹಾಗೂ ದುರ್ಬಲ ಮನಸ್ಥಿತಿ ಉಳ್ಳವರು ಆಗಿದ್ದಾರೆ. ಜೀವನದ ಅಂತ್ಯಭಾಗದಲ್ಲಿ ಬೆಳಕು ಕಾಣದಂತಾಗಿದ್ದು, ಅವಮಾನದಿಂದ ನೇಣಿಗೆ ಕೊರಳೊಡ್ಡಬೇಕಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಾಗರಿಕರು ಎಂಬ ವಿಳಾಸದಲ್ಲಿ ಪತ್ರ ಬರೆದಿರುವ ನಿವೃತ್ತ ಸರ್ಕಾರಿ ಅಧಿಕಾರಿಗಳು, ಮೋದಿಗೆ ದುಃಖ ಬರುವುದಿಲ್ಲ ಎಂದಿದ್ದಾರೆ.  ಬಿಜೆಪಿ ಅಧಿಕಾರದಲ್ಲಿರುವಾಗ, ನರೇಂದ್ರ ಮೋದಿ ಪ್ರಧಾನಿಯಾಗಿರುವ ಸಂದರ್ಭದಲ್ಲಿಯೇ ಎರಡು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇಂತಹ ಭಯಾನಕ ಸ್ಥಿತಿಯ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಲಿದ್ದಾರೆಯೇ ಎಂದು ಅವರು ಹೇಳಿದ್ದಾರೆ.

ಜಮ್ಮು-ಕಾಶ್ಮೀರದ ಕುತುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದಿದ್ದ ಅತ್ಯಾಚಾರ  ಪ್ರಕರಣದ ಚಾರ್ಚ್ ಶೀಟ್ ನಲ್ಲಿ ಭಯಾನಕತೆಯ ಮಾಹಿತಿ ಬಹಿರಂಗವಾಗಿದ್ದು,  ಇಡೀ ದೇಶವೇ ಬೆಚ್ಚಿ ಬಿದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT