ಪತ್ರಿಕಾಗೋಷ್ಠಿಯಲ್ಲಿ ಬನ್ವರಿಲಾಲ್ ಪುರೋಹಿತ್ 
ದೇಶ

ಆ ಮಹಿಳೆಯ ಮುಖ ಸಹ ನೋಡಿಲ್ಲ: ಮದುರೈ ಪ್ರಾಧ್ಯಾಪಕಿ ಬಗ್ಗೆ ತಮಿಳುನಾಡು ರಾಜ್ಯಪಾಲ

ಪದವಿಯಲ್ಲಿ ಹೆಚ್ಚು ಅಂಕ ಪಡೆಯಬೇಕಾದರೆ ಹಿರಿಯ ಅಧಿಕಾರಿಗಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದು...

ಚೆನ್ನೈ: ಪದವಿಯಲ್ಲಿ ಹೆಚ್ಚು ಅಂಕ ಪಡೆಯಬೇಕಾದರೆ ಹಿರಿಯ ಅಧಿಕಾರಿಗಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು ಎಂದು ತನ್ನ ನಾಲ್ವರು ವಿದ್ಯಾರ್ಥಿನಿಯರಿಗೆ ಸೂಚಿಸಿದ ಆರೋಪದ ಮೇಲೆ ಅಮಾನತುಗೊಂಡಿರುವ ಮದುರೈ ಸಹಾಯಕ ಪ್ರಾಧ್ಯಾಪಕಿ ನಿರ್ಮಲಾ ದೇವಿ ಮುಖ ಸಹ ನಾನು ನೋಡಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮಂಗಳವಾರ ಹೇಳಿದ್ದಾರೆ.
'ನಾನು ಆ ಮಹಿಳೆ ಮುಖ ಸಹ ನೋಡಿಲ್ಲ. ಅವರು ಯಾರೂ ಅಂತಲೇ ಗೊತ್ತಿಲ್ಲ. ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇದ್ದಾರೆ. ನನಗೆ 70-80 ವರ್ಷ ಆಗಿದೆ' ಎಂದು ಪುರೋಹಿತ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನಿರ್ಮಲಾ ದೇವಿ ವಿರುದ್ಧದ ತನಿಖೆ ಪಾರದರ್ಶಕವಾಗಿ ನಡೆಯಬೇಕು ಎಂದರೆ ನೀವು ಈ ತನಿಖೆಯಿಂದ ದೂರವಿರುಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ವರದಿಗಾರರ ಪ್ರಶ್ನೆಗೆ ರಾಜ್ಯಪಾಲರು ಈ ರೀತಿ ಉತ್ತರ ನೀಡಿದ್ದಾರೆ.
ಮದುರೈನ ದೇವಾಂಗ ಕಲಾ ಕಾಲೇಜಿನ ಪ್ರಾಧ್ಯಾಪಕಿ ನಿರ್ಮಲಾ ದೇವಿ ಅವರು, ವಿದ್ಯಾರ್ಥಿನಿಯರನ್ನು ಪುಸುಲಾಯಿಸಿ ಪದವೀಧರರಾಗಲು ಹಣ ನೀಡಬೇಡಿ ಬದಲಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದಳು.
ಈ ಸಂಬಂಧ ನಿರ್ಮಲಾ ದೇವಿ ನಾಲ್ವರು ವಿದ್ಯಾರ್ಥಿನಿಯರ ಜೊತೆ ನಡೆಸಿರುವ ದೂರ ಸಂಭಾಷಣೆಯ ಧ್ವನಿಸುರುಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೂರವಾಣಿ ಸಂಭಾಷಣೆಯಲ್ಲಿ ಪ್ರಾಧ್ಯಾಪಕಿ ರಾಜ್ಯಪಾಲರ ಹೆಸರು ಸಹ ಪ್ರಸ್ತಾಪಿಸಿದ್ದಾರೆ. 
ಈಗಾಗಲೇ ನಿರ್ಮಲಾ ದೇವಿಯನ್ನು ಅಮಾನತುಗೊಳಿಸಲಾಗಿದ್ದು, ರಾಜ್ಯಪಾಲರು ನಿವೃತ್ತ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ.
ದೂರವಾಣಿ ಸಂಭಾಷಣೆಯಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಿದ್ದರೂ ನೀವೇ ತನಿಖೆಗೆ ಆದೇಶಿಸುವುದು ಎಷ್ಟು ಸರಿ? ಎಂದು ವರದಿಗಾರರು ಪದೆ ಪದೇ ಪ್ರಶ್ನಿಸಿದರು ನೇರವಾಗಿ ಉತ್ತರಿಸದ ರಾಜ್ಯಪಾಲರು, ನನ್ನ ಜೀವನ ಸಂಪೂರ್ಣ ಪಾರದರ್ಶಕವಾಗಿದೆ ಎಂದಷ್ಟೆ ಉತ್ತರಿಸಿದರು.
ನಿರ್ಮಲಾ ದೇವಿ ದಶಕಗಳಿಂದ ವಿರುಧುನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಾನು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಆಪ್ತರಾಗಿರುವುದಾಗಿ ಹೇಳಿಕೊಂಡು ನಾಲ್ವರು ವಿದ್ಯಾರ್ಥಿನಿಯರಿಗೆ ಡಯಲ್ ಮಾಡಿ, ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಪದವಿ ಪಡೆಯಲು ಹಣ ಮತ್ತು ಸಂಶೋಧಕರಿಂದ ಬೆಂಬಲ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಧ್ವನಿ ಸುರುಳಿಯಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿ ಭರವಸೆ ನೀಡುವ ಅಂಶ ಸ್ಪಷ್ಟವಾಗಿ ಕೇಳಿಸುತ್ತದೆ. ಪದವೀಧರರಾಗಲು ವಿದ್ಯಾರ್ಥಿಗಳಿಗೆ ಹಣಕಾಸು ನೆರವು ಒದಗಿಸುತ್ತೇವೆ. ಈ ವಿಷಯವನ್ನು ಯಾರಿಗೆ ಹೇಳಬೇಡಿ. ಈ ವಿಷಯವನ್ನು ಪೋಷಕರಿಗೆ ತಿಳಿಸುವುದು ನಿಮಗೆ ಬಿಟ್ಟ ವಿಚಾರ. ನಾವು ಅಂದುಕೊಂಡ ರೀತಿಯಲ್ಲೇ ಎಲ್ಲವೂ ನಡೆಯಲಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ನಂತರ ವಿದ್ಯಾರ್ಥಿನಿಯರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಜಮೆ ಮಾಡಲಾಗುವುದು ಎಂಬ ಅಂಶವೂ ಧ್ವನಿ ಸುರುಳಿಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT