ಸಾಂದರ್ಭಿಕ ಚಿತ್ರ 
ದೇಶ

ಚಂದ್ರಯಾನ-2 ಉಡಾವಣೆ ಅಕ್ಟೋಬರ್-ನವೆಂಬರ್ ಗೆ ಮುಂದೂಡಿಕೆ: ಇಸ್ರೋ

ಈ ತಿಂಗಳಲ್ಲಿ ಉಡಾವಣೆಯಾಗಬೇಕಿದ್ದ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆ....

ನವದೆಹಲಿ: ಈ ತಿಂಗಳಲ್ಲಿ ಉಡಾವಣೆಯಾಗಬೇಕಿದ್ದ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆ ಅಕ್ಟೋಬರ್ - ನವೆಬಂರ್ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಂದ್ರಯಾನ-2 ಉಡಾವಣೆ ಮಾಡಲಾಗುವುದು ಎಂದು ಶಿವನ್ ಅವರು ಇಂದು ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿರುವುದಾಗಿ ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಚಂದ್ರಯಾನ - 2 ಉಡಾವಣೆ ಮಾಡುವ ಮುನ್ನ ಹೆಚ್ಚುವರಿ ಪರೀಕ್ಷೆಗಳನ್ನು ನಡೆಸುವಂತೆ ರಾಷ್ಟ್ರ ಮಟ್ಟದ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಚಂದ್ರಯಾನ ಉಡಾವಣೆ ಮುಂದೂಡಲಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಚಂದ್ರಯಾನ-2 ನಲ್ಲಿ ಇಸ್ರೋ, ಗ್ರಹವೊಂದರ ಮೇಲ್ಮೈನಲ್ಲಿ ಉರುಳುತ್ತ ಮಾದರಿಯನ್ನು ಸಂಗ್ರಹಿಸುವ 'ರೋವರ್‌' ಎಂಬ ತಂತ್ರಜ್ಞಾನವನ್ನುಇದೇ ಮೊದಲ ಬಾರಿಗೆ ಬಳಕೆ ಮಾಡುತ್ತಿದೆ. ಭೂಮಿಯ ಉಪಗ್ರಹ ಚಂದ್ರನ ಅಂಗಳಕ್ಕೆ ಇಸ್ರೋ ಕಳುಹಿಸುತ್ತಿರುವ 2ನೇ ಉಪಗ್ರಹ ಇದಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಇಸ್ರೋ ಹಲವಾರು ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಒಂದೇ ಏಟಿಗೆ ಎರಡು ಕಕ್ಷೆಗಳಿಗೆ 104 ಉಪಗ್ರಹಗಳನ್ನು ತಲುಪಿಸುವ ಮೂಲಕ ಮೇರು ಸಾಧನೆ ಮಾಡಿತ್ತು. 
2008 ಅಕ್ಟೋಬರ್‌ 22ರಲ್ಲಿ, ಆಂಧ್ರ ಪ್ರದೇಶದ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-1 ಮೂಲಕ ಚಂದ್ರನ ಅಂಗಳದಲ್ಲಿ ನೀರು ಪತ್ತೆ ಮಾಡಿದ ಖ್ಯಾತಿ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!