ದೇಶ

ಸ್ವಾತಂತ್ರ್ಯ ಬಂದು 70 ವರ್ಷವಾದರೂ ಕತುವಾ ಪ್ರಕರಣ ನಡೆಯುತ್ತಿರುವುದು ನಾಚಿಕೆಗೇಡು: ರಾಷ್ಟ್ರಪತಿ

Manjula VN
ಜಮ್ಮು: ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಕತುವಾದಂತಹ ಪ್ರಕರಣಗಳು ನಡೆಯುತ್ತಿರುವುದು ನಾಚಿಕೆಗೇಡು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಹೇಳಿದ್ದಾರೆ. 
ಶ್ರೀಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕಾಶ್ಮೀರದ ಕತುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ. 
ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಕತುವಾದಂತಹ ಪ್ರಕರಣಗಳು ದೇಶದಲ್ಲಿ ಸಂಭವಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಎಂತಹ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದೇವೆಂಬುದರ ಬಗ್ಗೆ ನಾವು ಚಿಂತಿಸಬೇಕು. ಇಂತಹ ಘಟನೆಗಳು ಮತ್ತಾವುದೇ ಹೆಣ್ಣುಮಕ್ಕಳಿಗೆ, ಬಾಲಕಿಯರಿಗೆ ಆಗಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. 
ಬಳಿಕ ಕಾಮನ್'ವೆಲ್ತ್ ಕ್ರೀಡಾಕೂಟ-2018ರಲ್ಲಿ ಭಾರತೀಯರ ಸಾಧನೆಯನ್ನು ಕೊಂಡಾಡಿರುವ ಅವರು, ಭಾರತದ ಮಕ್ಕಳು ದೇಶಕ್ಕೆ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. 
ದೆಹಲಿ ಅನಿಕ ಬಾತ್ರ, ಮೇರಿ ಕೋಮ್, ಮಣಿಪುರದ ಮೀರಾಬಾಯಿ ಚಾನು ಮತ್ತು ಸಂಗೀತ ಚನು, ಹರಿಯಾಣದ ಮನು ಭಾಕೆರ್ ಮತ್ತು ವೈನೇಶ್ ಫೋಗಟ್, ತೆಲಂಗಾಣದ ಸೈನಾ ನೆಹ್ವಾಲ್ ಮತ್ತು ಪಂಜಾಬ್ ರಾಜ್ಯದ ಹೀನಾ ಸಿಧು ದೇಶಕ್ಕೆ ಗೌರವವನ್ನು ತಂದಿದ್ದಾರೆಂದು ತಿಳಿಸಿದ್ದಾರೆ. 
SCROLL FOR NEXT