ಪ್ರಧಾನಿ ಮೋದಿ 'ಆಧುನಿಕ ಹಿಟ್ಲರ್': ಕೇರಳ ಕಾಂಗ್ರೆಸ್ ನಾಯಕ ಕೆವಿ ಥಾಮಸ್
ಪ್ರಧಾನಿ ನರೇಂದ್ರ ಮೋದಿ ಆಧುನಿಕ ಹಿಟ್ಲರ್ ಎಂದು ಕೇರಳ ಕಾಂಗ್ರೆಸ್ ಹಿರಿಯ ಮುಖಂಡ ಕೆವಿ ಥಾಮಸ್ ಕರೆದಿದ್ದಾರೆ...
ಕೊಚ್ಚಿ (ಕೇರಳ): ಪ್ರಧಾನಿ ನರೇಂದ್ರ ಮೋದಿ ಆಧುನಿಕ ಹಿಟ್ಲರ್ ಎಂದು ಕೇರಳ ಕಾಂಗ್ರೆಸ್ ಹಿರಿಯ ಮುಖಂಡ ಕೆವಿ ಥಾಮಸ್ ಕರೆದಿದ್ದಾರೆ.
ಕೇರಳ ಕೆಪಿಸಿಸಿ ಅಧ್ಯಕ್ಷ ಎಂಎಂ ಹಸನ್ ಆಯೋಜಿಸಿದ್ದ ಜನಮೋಚನ ಯಾತ್ರೆಯಲ್ಲಿ ಮಾತನಾಡಿದ ಕೆವಿ ಥಾಮಸ್, ಪ್ರಧಾನಿ ಮೋದಿ ಹಾಗೂ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಜನ ವಿರೋಧಿ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಾಗಿ ಆರೋಪಿಸಿರುವ ಶ್ರೀಜಿತ್ ಅವರ ಪುತ್ರಿಯ ವಿದ್ಯಾಬ್ಯಾಸಕ್ಕಾಗಿ ತಮ್ಮ ಟ್ರಸ್ಟ್ ವತಿಯಿಂದ 2.5 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.