ಗುಜರಾತ್: ಗುಜರಾತ್ ನ ನರೋಡ ಪಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ನಿರ್ದೋಷಿ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ.
2002ರಲ್ಲಿ ನಡೆದ ನರೋಡ ಪಟಿಯಾ ನರಮೇಧದಲ್ಲಿ 97 ಮಂದಿಯ ಹತ್ಯೆಯಾಗಿತ್ತು. ಈ ಸಂಬಂಧ ಭಜರಂಗ ದಳದ ನಾಯಕ ಬಾಬು ಭಜರಂಗಿ ಅವರು ಸೇರಿದಂತೆ ಒಟ್ಟು 31 ಮಂದಿ ತಪ್ಪಿತಸ್ಥರೆಂದು ವಿಷೇಶ ನ್ಯಾಯಲಯ ತೀರ್ಪು ನೀಡಿತ್ತು.
ಈ ಪ್ರಕರಣ ಸಂಬಂಧ ಇಂದು ತೀರ್ಪು ನೀಡಿದ ಗುಜರಾತ್ ಹೈಕೋರ್ಟ್ ಮಾಯಾಬೆನ್ ಕೊಡ್ನಾನಿ ನಿರ್ದೋಷಿ ಎಂದು ತೀರ್ಪು ನೀಡಿದ್ದು ಉಳಿದಂತೆ 32 ಅಪರಾಧಿಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
2012ರ ಆಗಸ್ಟ್ ನ ವಿಶೇಷ ತನಿಖಾ ತಂಡ(ಎಸ್ಐಟಿ) ವಿಶೇಷ ನ್ಯಾಯಾಲಯ ಕೊಡ್ನಾನಿ ಸಹಿತ 32 ಮಂದಿ ದೋಷಿಗಳು ಎಂದು ತೀರ್ಪು ನೀಡಿತ್ತು. ಕೊಡ್ನಾನಿಗೆ 28 ತಿಂಗಳ ಸೆರೆವಾಸ ವಿಧಿಸಿತ್ತು. ಬಜರಂಗ್ ಗೆ ಜೀವವಾಧಿ ಶಿಕ್ಷೆ ಪ್ರಕಟಿಸಿತ್ತು ಏಳು ಆರೋಪಿಗಳಿಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಉಳಿದ ಆರೋಪಿಗಳಿಗೆ 14 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು.
ಆರೋಪಿಗಳು ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಎಸ್ಐಟಿ 29 ಆರೋಪಿಗಳನ್ನು ದೋಷಮುಕ್ತಗೊಳಿಸುವುದರ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಇಂದು ನೀಡಿದ ತೀರ್ಪಿನಲ್ಲಿ ಗುಜರಾತ್ ಹೈಕೋರ್ಟ್ 31 ಆರೋಪಿಗಳ ಜೈಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos