ನವದೆಹಲಿ: ಅತ್ಯಾಚಾರದಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಪಿಐಎಲ್ ಸಲ್ಲಿಸಬಹುದೇ ಎಂದು ಸುಪ್ರೀಂ ಕೋರ್ಟ್ ವಕೀಲರನ್ನು ಪ್ರಶ್ನಿಸಿದೆ.
ಪ್ರಭಾವಿ ರಾಜಕಾರಣಿಗಳ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಾಗ ಪೊಲೀಸರು ಎಫ್ಐಆರ್ ಹಾಕುವುದಿಲ್ಲ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ಎಂಎಲ್ ಶರ್ಮಾ ಎಂಬುವವರು ಪಿಐಎಲ್ ಹಾಕಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ ಎಸ್ಎ ಬಾಬ್ಡೆ ಹಾಗೂ ಎಲ್ ನಾಗೇಶ್ವರ ರಾವ್ ಅವರಿದ್ದ ಪೀಠ, ಕ್ರಿಮಿನಲ್ ಪ್ರಕರಣಗಳಲ್ಲಿ ಪಿಐಎಲ್ ಸಲ್ಲಿಸಬಹುದೇ ಎಂದು ಪ್ರಶ್ನಿಸಿದೆ.
ಇದೇ ವೇಳೆ ಅತ್ಯಾಚಾರಕ್ಕೊಳಗಾದವರ ಸಂಬಂಧಿಕರು ಕೋರ್ಟ್ ಮೊರೆ ಹೋಗಿದ್ದಾರಾ?ಎಂದೂ ವಕೀಲರನ್ನು ಕೋರ್ಟ್ ಪ್ರಶ್ನಿಸಿದೆ.
ಉನ್ನಾವೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ ಶರ್ಮಾ ಪಿಐಎಲ್ ದಾಖಲಿಸಿದ್ದರು. ಇದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಲು ಏ.11 ರಂದು ಕೋರ್ಟ್ ಒಪ್ಪಿಗೆ ಸೂಚಿಸಿತ್ತು.