

ಬಿಗ್ ಬಾಸ್ ಮನೆ ನಿಯಮ ಉಲ್ಲಂಘನೆ ಮಾಡಿದ್ದರಿಂದ ಬಿಗ್ ಬಾಸ್ ಮಾಡರ್ನ್ ಮಹಾಕವಿ ಮಂಜನನ್ನು ಎಲಿಮಿನೇಟ್ ಮಾಡಿದ್ದಾರೆ. ಹೀಗಾಗಿ ಇಂದು ಮಂಜ ದೊಡ್ಮನೆಯಿಂದ ಹೊರಹೋಗಿದ್ದಾರೆ. ಎಲಿಮಿನೇಷನ್ ಬಳಿಕ ಕಿಚ್ಚನ ಮುಂದೆ ಬಂದು ಮಂಜ ಕಣ್ಣೀರು ಹಾಕಿದ್ದಾರೆ.
ನಾನು ತಪ್ಪು ಮಾಡಿದ್ದೇನೆ. ನನ್ನ ಹತ್ತು ವರ್ಷದ ಕನಸು ನಾನೇ ಹಾಳು ಮಾಡಿಕೊಂಡಿದ್ದೇನೆ. ನಿಮ್ಮನ್ನ ನೋಡುವುದೇ ಒಂದು ಕನಸು. ಆದರೆ, ನನ್ನ ತಪ್ಪಿನಿಂದ ನನ್ನ ಕನಸಿನ ಕಣ್ಣಲ್ಲೂ ನೀರು ತರಿಸಿದ್ದೇನೆ ಎಂದು ಹೇಳಿ ಸುದೀಪ್ ಎದುರು ಕಣ್ಣೀರು ಹಾಕಿದನು.
ಅತಿಯಾದ ವರ್ತನೆ, ಬಳಸಿದ ಕೆಟ್ಟ ಮಾತುಗಳು, ಮಂಜ ಮನೆಯಿಂದ ಹೊರಗೆ ಬರುವಂತಾಗಿದೆ. ಮಾಡರ್ನ್ ಕವಿ ಮಂಜ ಕಾಮನ್ ಮ್ಯಾನ್ ಆಗಿ ಮನೆಗೆ ಕಾಲಿಟ್ಟಿದ್ದರು. ಮನೆಯ ನಿಯಮ ಉಲ್ಲಂಘಿಸಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.