ದೇಶ

ನೀರವ್ ಮೋದಿ ವಿರುದ್ಧ ಹಾಂಕಾಂಗ್ ಹೈಕೋರ್ಟ್ ಮೆಟ್ಟಿಲೇರಿದ ಪಿಎನ್ ಬಿ

Lingaraj Badiger
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ಗೆ ಸುಮಾರು 13 ಸಾವಿರ ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ  ಭಾರತೀಯ ಜ್ಯುವೆಲ್ಲರ್ ಉದ್ಯಮಿ ನೀರವ್ ಮೋದಿ ವಿರುದ್ಧ ಪಿಎನ್ ಬಿ ಶನಿವಾರ ಹಾಂಕಾಂಗ್ ಹೈಕೋರ್ಟ್ ಮೆಟ್ಟಿಲೇರಿದೆ.
ಪಿಎನ್ ಬಿ ವಂಚಕ ನೀರವ್ ಮೋದಿ ಮತ್ತು ಆತನ ಅಂಕಲ್, ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ಇರುವ ದೇಶ ಮತ್ತು ಅವರು ಆಸ್ತಿಗಳನ್ನು ಹೊಂದಿರುವ ದೇಶಗಳ ಕೋರ್ಟ್ ಮೊರೆ ಹೋಗಲಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಮೋದಿ ಮತ್ತು ಮೇಹುಲ್ ಚೋಕ್ಸಿ ಇಬ್ಬರೂ ಹಾಂಕಾಂಗ್ ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ನಂಬಲಾಗಿದ್ದು, ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಚೀನಾ ಗಣರಾಜ್ಯಕ್ಕೆ ಸೇರಿದ ಹಾಂಕಾಂಗ್‌ ವಿಶೇಷ ಆಡಳಿತ ವಲಯದ ಸರ್ಕಾರಕ್ಕೆ ವಂಚಕ ಆರೋಪಿಗಳನ್ನು ಬಂಧಿಸುವಂತೆ ಕೋರಿಕೆ ಸಲ್ಲಿಸಿದೆ.
ಭಾರತದ ಕೋರಿಕೆ ಕುರಿತು ಪ್ರತಿಕ್ರಿಯಿಸಿರುವ ಚೀನಾ, 'ಒಂದು ದೇಶ- ಎರಡು ಆಡಳಿತ ವ್ಯವಸ್ಥೆಯಡಿ ಕೇಂದ್ರ ಸರ್ಕಾರ ಅನುಮತಿಯೊಂದಿಗೆ ಹಾಂಕಾಂಗ್ ಸರ್ಕಾರ ಸ್ವತಂತ್ರ ನಿರ್ಧಾರ ಕೈಗೊಳ್ಳಬಹುದು' ಇದರಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
SCROLL FOR NEXT