ದೇಗುಲದ ವಿಗ್ರಹಗಳ ಸ್ಥಳಾಂತರಿಸುತ್ತಿರುವ ಗ್ರಾಮಸ್ಥರು 
ದೇಶ

400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ, ಯಾವುದು ಈ ದೇಗುಲ?

ಕೇರಳದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಮುಂದುವರೆದಿರುವಂತೆಯೇ ಅತ್ತ ಒಡಿಶಾದ ಪುರಾತನ ದೇಗುಲದಲ್ಲಿ ಬರೊಬ್ಬರಿ 400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ ನೀಡಲಾಗಿದೆ.

ಭುವನೇಶ್ವರ್: ಕೇರಳದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಮುಂದುವರೆದಿರುವಂತೆಯೇ ಅತ್ತ ಒಡಿಶಾದ ಪುರಾತನ ದೇಗುಲದಲ್ಲಿ ಬರೊಬ್ಬರಿ 400 ವರ್ಷಗಳ ಬಳಿಕ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ ನೀಡಲಾಗಿದೆ.
ಅರೆ ಇದೇನಿದು ಪರುಷರಿಗೂ ದೇಗುಲ ಪ್ರವೇಶ ನಿರ್ಬಂಧವೇ ಎಂದು ಅಚ್ಚರಿ ಪಡಬೇಡಿ..ಹೌದು ಒಡಿಶಾದ ಕೇಂದ್ರ ಪಾರಾಜಿಲ್ಲೆಯ ಸತಭಯಾ ಗ್ರಾಮದಲ್ಲಿರುವ ಮಾ ಪಂಚುಬರಹಿ ದೇಗುಲದಲ್ಲಿಇದೇ ಮೊದಲ ಬಾರಿಗೆ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅನುವು ಮಾಡಿಕೊಡಲಾಗಿದೆ. ಒಡಿಶಾದಲ್ಲಿ ಬೀಳುತ್ತಿರುವ ಸತತ ಮಳೆ ಹಾಗೂ ನೈಸರ್ಗಿಕ ವಿಕೋಪದಿಂದಾಗಿ ಇಲ್ಲಿನ ಸತಭಯಾ ಗ್ರಾಮ ಸಂಪೂರ್ಣ ಮುಳುಗಡೆಯಾಗಿದ್ದು, ಇದೇ ಕಾರಣಕ್ಕೆ ಇಲ್ಲಿನ ದೇಗುಲ ಸ್ಥಳಾಂತರಕ್ಕೆ ದೇಗುಲ ಆಡಳಿತ ಮಂಡಳಿ ನಿರ್ಧರಿಸಿತ್ತು. 
ಶತಮಾನಗಳಿಂದಲೂ ಈ ದೇಗುಲವನ್ನು ಇಲ್ಲಿನ ಸ್ಥಳೀಯ ದಲಿತ ಮಹಿಳೆಯರು ವಹಿಸಿಕೊಂಡಿದ್ದು, ಅವರೇ ದೇಗುಲದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕಳೆದೊಂದು ವಾರದಿಂದ ಬೀಳುತ್ತಿರುವ ಸತತ ಮಳೆಯಿಂದಾಗಿ ದೇಗುಲ ಇರುವ ಸತಭಯಾ ಗ್ರಾಮ ನೀರಿನಲ್ಲಿ ಮುಳುಗಡೆಯಾಗಿದ್ದು, ದೇಗುಲ ಸ್ಥಳಾಂತರಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ. ಇದೇ ಕಾರಣಕ್ಕೆ ದೇಗುಲದ ಪ್ರಧಾನ ಅರ್ಚಕರಾದ ಐದು ಮಹಿಳೆಯರು ಇತ್ತೀಚೆಗೆ ದೇಗುಲ ಸ್ಥಳಾಂತರಕ್ಕಾಗಿ ಅಲ್ಲಿಗೆ ತೆರಳಿದ್ದರು. ಆದರೆ ದೇವಾಲಯದಲ್ಲಿರುವ ಮೂರ್ತಿಗಳನ್ನು ಸ್ಥಳಾಂತರ ಮಾಡಲು ಸಾಧ್ಯವಾಗಿಲ್ಲ.
ಹೀಗಾಗಿ ಅನಿವಾರ್ಯಕಾರಣಗಳಿಂದಾಗಿ ಅವರು ಸುಮಾರು 400 ವರ್ಷಗಳ ದೇಗುಲ ಇತಿಹಾಸವನ್ನು ಬದಿಗೊತ್ತಿ ದೇಗುಲ ಪ್ರವೇಶಕ್ಕೆ ಪುರುಷರಿಗೆ ಅವಕಾಶ ನೀಡಿ, ದೇಗುಲ ಸ್ಥಳಾಂತರಕ್ಕಾಗಿ ನೆರವು ಪಡೆದಿದ್ದಾರೆ. ಇನ್ನು ದೇಗುಲದ ಒಳಗೆ ಒಟ್ಟು ಐದು ಕಪ್ಪುಕಲ್ಲಿನ ವಿಗ್ರಹಗಳಿದ್ದು, ಒಂದೊಂದು ವಿಗ್ರಹವೂ ಸುಮಾರು 1 ರಿಂದ 1.5 ಟನ್ ತೂಕವಿದೆಯಂತೆ. ಇದೇ ಕಾರಣಕ್ಕೆ ಮಹಿಳಾ ಅರ್ಚಕರು ಅದನ್ನು ತೆಗೆದುಕೊಂಡು ಹೊರಬರಲಾಗದೇ ಪುರುಷರ ನೆರವು ಪಡೆದಿದ್ದಾರೆ. 
ಐದು ಜನರ ಪುರುಷರ ತಂಡ ಇದೀಗ ಒಂದೊಂದೇ ವಿಗ್ರಹಗಳನ್ನು ದೇಗುಲದಿಂದ ಹೊರಕ್ಕೆ ತಂದು ದೋಣಿ ಮೂಲಕ ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಿದ್ದಾರೆ. ಸ್ಥಳೀಯರು ತಿಳಿಸಿರುವಂತೆ ಕಳೆದ ಏಪ್ರಿಲ್ 20ರಿಂದ ಈ ದೇಗುಲ ಸ್ಥಳಾಂತರ ಕಾರ್ಯ ಸಾಗಿದ್ದು, ಸತಭಯಾ ಗ್ರಾಮದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಬಗಪಟಿಯಾ ಗ್ರಾಮಕ್ಕೆ ದೇಗುಲ ಮತ್ತು ಅದರ ವಿಗ್ರಹಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ದೇಗುಲ ಸ್ಥಳಾಂತರ ಕಾರ್ಯಕ್ಕೆ ಒಡಿಶಾದ  ನೈಸರ್ಗಿಕ ವಿಕೋಪ ನಿಯಂತ್ರಣ ಪ್ರಾಧಿಕಾರ ಕೂಡ ಕೈ ಜೋಡಿಸಿದ್ದು, ಬಗಪಟಿಯಾ ಗ್ರಾಮದಲ್ಲಿ ದೇಗುಲ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ ದೇಗುಲ ಮಾತ್ರವಲ್ಲದೇ ಸತಭಯಾ ಗ್ರಾಮ ತೊರೆದ ಗ್ರಾಮಸ್ಥರಿಗೂ ಇದೇ ಗ್ರಾಮದಲ್ಲಿ ನಿವಾಸ ಕಲ್ಪಿಸಲಾಗುತ್ತದೆ ಎಂದು ಒಡಿಶಾ ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನು ಒಡಿಶಾದ ಮಾ ಪಂಚುಬರಹಿ ದೇಗುಲದ ಕುರಿತು ಇಲ್ಲಿನ ಸ್ಥಳೀಯರಿಗೆ ಅಪಾರ ಭಕ್ತಿ ಮತ್ತು ನಿಷ್ಠೆ ಇದ್ದು, ಈ ದೇವಿ ನೈಸರ್ಗಿಕ ವಿಕೋಪದಿಂದ ಗ್ರಾಮಸ್ಥರನ್ನು ಸಂರಕ್ಷಿಸುತ್ತಾಳೆ ಎಂಬ ನಂಬಿಕೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ