ದೇಶ

ಮೇಘಾಲಯದಲ್ಲಿ ಎಎಫ್ಎಸ್ ಪಿಎ ಸಂಪೂರ್ಣ ರದ್ದು, ಅರುಣಾಚಲದಲ್ಲಿ ಭಾಗಶಃ ರದ್ದು

Lingaraj Badiger
ನವದೆಹಲಿ: ಮೇಘಾಲದಲ್ಲಿ ಮಾರ್ಚ್ 31ರಿಂದಲೇ ಜಾರಿಗೆ ಬರುವಂತೆ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಸೇನಾ ಪಡೆಗೆ ವಿಶೇಷ ಅಧಿಕಾರಿ ಕಾಯ್ದೆ(ಎಎಫ್ ಎಸ್ ಪಿಎ)ಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ ಕೇವಲ ಎಂಟು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮಾತ್ರವೇ ಅದನ್ನು ಸೀಮಿತಗೊಳಿಸಲಾಗಿದೆ.
ಮೇಘಾಲಯದಲ್ಲಿ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು 
ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಸರ್ಕಾರ ಎಎಫ್ ಎಸ್ ಸಿಎ ಕಾಯಿದೆಯನ್ನು ಮೇಘಾಲಯದಿಂದ ಸಂಪೂರ್ಣವಾಗಿ ತೆಗೆದು ಹಾಕಿದೆ ಮತ್ತು ಅರುಣಾಚಲ ಪ್ರದೇಶದಲ್ಲಿ  ಹದಿನಾರು ಪೊಲೀಸ್‌ ಠಾಣೆಗಳಿಗೆ ಬದಲು ಕೇವಲ ಎಂಟು ಪೊಲೀಸ್‌ ಠಾಣೆಗಳಿಗೆ ಮಾತ್ರವೇ ಅದನ್ನು ಸೀಮಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೇಘಾಲಯ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆಯು ಗಮನಾರ್ಹವಾಗಿ ಸುಧಾರಿಸಿರುವುದನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಸಶಸ್ತ್ರ ಪಡೆಗಳ ಈ ವಿಶೇಷ ಅಧಿಕಾರ ಕಾಯ್ದೆ ಅಡಿ, ಯಾವುದೇ ಸೂಚನೆ ನೀಡಿದ ಕಾರ್ಯಚರಣೆ ನಡೆಸುವ ಮತ್ತು ಬಂಧಿಸಬಹುದಾಗಿದೆ.
SCROLL FOR NEXT