ಸಂಗ್ರಹ ಚಿತ್ರ 
ದೇಶ

ಯುವತಿಯೊರ್ವಳನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯ ಘರ್ ವಾಪಸಿ!

ಮುಸ್ಲಿಂ ಯುವತಿಯೊರ್ವಳನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ದಲಿತನನ್ನು ಕೊನೆಗೂ ಘರ್ ವಾಪಸಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯಶಸ್ವಿಯಾಗಿದ್ದಾರೆ...

ಶಾಮ್ಲಿ(ಉತ್ತರಪ್ರದೇಶ): ಮುಸ್ಲಿಂ ಯುವತಿಯೊರ್ವಳನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ದಲಿತನನ್ನು ಕೊನೆಗೂ ಘರ್ ವಾಪಸಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಮುಖಂಡರು ಯಶಸ್ವಿಯಾಗಿದ್ದಾರೆ. 
ಉತ್ತರಪ್ರದೇಶದ ಶಾಮ್ಲಿ ಎಂಬಲ್ಲಿ ದಲಿತ ವ್ಯಕ್ತಿಯೋರ್ವ ತನ್ನ ಗೆಳತಿ ಮುಸ್ಲಿಂ ಯುವತಿಯೊರ್ವಳನ್ನು ವಿವಾಹವಾಗಲು ಇಚ್ಛಿಸಿದ್ದ ಇದಕ್ಕೆ ಮೌಲ್ವಿ ಸಹ ಇಸ್ಲಾಂಗೆ ಮತಾಂತರಗೊಳ್ಳುವಂತೆ ಸೂಚಿಸಿದ್ದರು. ಅಂತೆ ಮುಜಾಫರ್ ನಗರದ ಕೋರ್ಟ್ ನಲ್ಲಿ ಮೌಲ್ವಿ ಆತನನ್ನು ಮುಸ್ಲಿಂ ಆಗಿ ನೊಂದಾಯಿಸಿದ್ದರು. 
ಈ ವಿಷಯ ತಿಳಿದ ಕೂಡಲೇ ಭಜರಂಗ ದಳ ಸೇರಿದಂತೆ ಹಲವು ಹಿಂದೂ ಸಂಘಟನೆ ಮುಖಂಡರು ಆತನ ಮನೆಗೆ ತೆರಳಿ ಆತನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಮೊದಲಿಗೆ ದಲಿತ ಯುವಕ ಘರ್ ವಾಪಸಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆದರೆ ಬಳಿಕ ಆತ ಮನೆಯೊಳಗೆ ಹೋಗಿ ದಾಡಿಯನ್ನು ಬೋಳಿಸಿಕೊಂಡು ಅಣೆಗೆ ತಿಲಕವಿಟ್ಟುಕೊಂಡು ಹೊರಗೆ ಬಂದಿದ್ದು ಆತ ಮತ್ತೆ ಘರ್ ವಾಪಸಿ ಮಾಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಬೆಂಗಳೂರು ಬಲು ದುಬಾರಿ: ನಮ್ ಊರಲ್ಲಿ ಬಟ್ಟೆ ಇಸ್ತ್ರಿಗೆ ಬರೀ 5 ರೂಪಾಯಿ, ಆದ್ರೆ ಇಲ್ಲಿ 20 ರೂಪಾಯಿ!: ನೊಯ್ಡಾ ನಿವಾಸಿ ಅಚ್ಚರಿ!

SCROLL FOR NEXT