ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್

ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಮೆತ್ತಿಕೊಂಡಿದೆ ಎಂದಿದ್ದಾರೆ.

ಸಲ್ಮಾನ್ ಖುರ್ಷಿದ್
Srinivas Rao BV
Updated On : 24 Apr 2018, 2:02 am
ಅಲೀಘರ್: ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ನಮ್ಮ ಪಕ್ಷದ ’ಕೈ’ಗೆ ಮುಸ್ಲಿಮರ ರಕ್ತದ ಕಲೆ ಮೆತ್ತಿಕೊಂಡಿದೆ ಎಂದಿದ್ದಾರೆ. 
ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಸಲ್ಮಾನ್ ಖುರ್ಷಿದ್ ಈ ಹೇಳಿಕೆ ನೀಡಿದ್ದಾರೆ. ಸಂವಾದದಲ್ಲಿ ಅಮಿರ್ ಮಿಂಟೋಯಿ ಎಂಬ ವಿದ್ಯಾರ್ಥಿ ಕಾಂಗ್ರೆಸ್ ಪಕ್ಷದ ಅವಧಿಯಲ್ಲೇ ಹೆಚ್ಚು ಕೋಮು ಗಲಭೆಗಳು ಸಂಭವಿಸಿರುವುದು ಎಂಬ ವಿಷಯವನ್ನು ಪ್ರಸ್ತಾಪಿಸಿದರು, ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್ ಖುರ್ಷಿದ್, ಕಾಂಗ್ರೆಸ್ ಪಕ್ಷದ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆ ಇದೆ. ಆ ಪಕ್ಷದ ನಾಯಕನಾಗಿ ನನಗೆ ನನ್ನ ಕೈಯಲ್ಲಿಯೂ ಆ ಕಲೆಗಳಿವೆ ಎನಿಸುತ್ತದೆ ಎಂದಿದ್ದಾರೆ. 
ಎಎಂಯು ಕಾಯ್ದೆಗೆ 1948 ರಲ್ಲಿ ತಿದ್ದುಪಡಿ ತರಲಾಯಿತು. ಇದಾದ ಬಳಿಕ 1950 ರಲ್ಲಿ ರಾಷ್ಟ್ರಪತಿಗಳ ಆದೇಶದ ಮೂಲಕ ಮುಸ್ಲಿಮ್ ದಲಿತರು ಎಸ್ ಸಿ/ಎಸ್ ಟಿ ಕೋಟಾದಲ್ಲಿ ಸಿಗುವ ಮೀಸಲಾತಿಯಿಂದ ವಂಚಿತರಾದರು.  ಹಶಿಂಪುರಾ, ಮಲ್ಯನಾ, ಮೀರತ್, ಮುಜಫರ್ನಗರ, ಭಾಗಲ್ಪುರ್, ಮೊರಾದಾಬಾದ್ ಮತ್ತು ಅಲಿಗಢ್ ಗಳಲ್ಲಿ ಮುಸ್ಲಿಂ ವಿರೋಧಿ ದಂಗೆಗಳಾಗಿದ್ದು, ಬಾಬ್ರಿ ಮಸೀದಿ ಧ್ವಂಸವಾಗಿದ್ದು ಎಲ್ಲವೂ ಕಾಂಗ್ರೆಸ್ ನ ಅವಧಿಯಲ್ಲೇ, ಈ ರಕ್ತದ ಕಲೆಗಳನ್ನು ಕಾಂಗ್ರೆಸ್ ಹೇಗೆ ಅಳಿಸುತ್ತದೆ ಎಂದು ವಿದ್ಯಾರ್ಥಿ ಅಮೀರ್ ಸಲ್ಮಾನ್ ಖುರ್ಷಿದ್ ಅವರನ್ನು ಪ್ರಶ್ನಿಸಿದ್ದಾರೆ. 

Advertisement

Advertisement

ಖುರ್ಷಿದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ, ಕಾಂಗ್ರೆಸ್  ತಾನು ಮಾಡಿರುವ ಪಾಪಕ್ಕೆ ಈಗ ತಾನೇ ಬೆಲೆ ತೆರುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement