ಪ್ರಧಾನಮಂತ್ರಿ ನರೇಂದ್ರ ಮೋದಿ
ವೂಹಾನ್: ಚೀನಾ ಅದ್ಯಕ್ಷ ಕ್ಸಿ ಜಿನ್ ಪಿಂಗ್ಅವರೊಂದಿಗೆ ನಡೆಸಿದ ಮಾತುಕತೆ ವ್ಯಾಪಕ ಮತ್ತು ಫಲಪ್ರದವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ಚೀನಾ ಭೇಟಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ವೂಹಾನ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದು, ಅತ್ಯಂತ ಸಂತಸವನ್ನು ತಂದಿದೆ. ಮಾತುರಕತೆ ವೇಳೆ ಭಾರತ ಮತ್ತು ಚೀನಾ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಇತರೆ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದೇವೆಂದು ಹೇಳಿದ್ದಾರೆ.
ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅತ್ಯುತ್ತಮವಾಗಿ ಸ್ವಾಗತಿಸಿದ್ದಕ್ಕೆ ಮೋದಿಯವರು ಇದೇ ವೇಳೆ ಧನ್ಯವಾದಗಳನ್ನು ಹೇಳಿದ್ದಾರೆ.
ಹ್ಯೂಬೀ ಪ್ರಾಂತೀಯ ಮ್ಯೂಸಿಯಂ ಭೇಟಿ ವೇಳೆ ನನ್ನ ಜೊತೆಗಿದ್ದದ್ದು, ಬಹಳ ಸಂತಸವನ್ನು ತಂದಿದೆ. ಮ್ಯೂಸಿಯಂ ಚೀನಾದ ಇತಿಹಾಸ ಮತ್ತು ಸಂಸ್ಕೃತಿಯ ಮಹತ್ವದ ಅಂಶಗಳಿರುವ ನೆಲೆಯಾಗಿದೆ ಎಂದು ತಿಳಿಸಿದ್ದಾರೆ.