ಪುದುಚೇರಿ ಲೆ. ಗವರ್ನರ್ ಕಿರಣ್ ಬೇಡಿ 
ದೇಶ

ಗ್ರಾಮಗಳು ಬಯಲು ಶೌಚ ಮುಕ್ತವಾಗದಿದ್ದರೆ ಉಚಿತ ಅಕ್ಕಿ ಇಲ್ಲ: ಕಿರಣ್ ಬೇಡಿ

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಹಳ್ಳಿಗಳುಮೇ 31ಕ್ಕೆ ಮೊದಲು ಬಯಲು ಬಹಿರ್ದಸೆ ಮುಕ್ತ ಗ್ರಾಮಗಳು...

ಪುದುಚೇರಿ: "ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಹಳ್ಳಿಗಳುಮೇ 31ಕ್ಕೆ ಮೊದಲು ಬಯಲು ಬಹಿರ್ದಸೆ ಮುಕ್ತ ಗ್ರಾಮಗಳು ಎನ್ನುವ ಪ್ರಮಾಣಪತ್ರ ಪಡೆಯದೆ ಹೋದಲ್ಲಿ ಅವುಗಳಿಗೆ ನೀಡುತ್ತಿರುವ ಉಚಿತ ಅಕ್ಕಿ ವಿತರಣೆ ಸೌಲಭ್ಯವನ್ನು ನಿಲ್ಲಿಸಲಾಗುವುದು" ಪುದುಚೇರಿ ಲೆ. ಗವರ್ನರ್ ಕಿರಣ್ ಬೇಡಿ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.
ಗ್ರಾಮೀಣ ಭಾಗದ ಅರ್ಧಕ್ಕೆ ಹೆಚ್ಚು ಜನ ಬಳಸುತ್ತಿರುವ ಈ ಯೋಜನೆ ಕುರಿತಂತೆ ಬೇಡಿ ಬಯಲು ಬಹಿರ್ದೆಶೆ ಮುಕ್ತ ಹಾಗು ಪ್ಲಾಸ್ಟಿಕ್ ಹಾಗೂ ಅಪಾಯಕಾರಿ ಕಸಗಳಿಂದ ಮುಕ್ತ ಗ್ರಾಮ ಎನ್ನುವ ಪ್ರಮಾಣಪತ್ರ ಪಡೆಯದ ಗ್ರಾಮಗಳಿಗೆ ಉಚಿತ ಅಕ್ಕಿ ವಿತರಣೆಯನ್ನು ನಿಲ್ಲಿಸಲಾಗುತ್ತದೆ " ಎಂದಿದ್ದಾರೆ.
ಈ ಯೋಜನೆಯ ಸೌಲಭ್ಯ ಬಳಸಿಕೊಳ್ಳುವುದಕ್ಕಾಗಿ ಶಾಸಕರು ಹಾಗೂ ಇಲಾಖಾ ಆಯುಕ್ತರು ಸಿವಿಲ್ ಸರಬರಾಜು ಕಮಿಷನರ್ ಗೆ ನಿಡಿದ ಜಂಟಿ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಕಿರಣ್ ಬೇಡಿ ಹೇಳಿದ್ದಾಗಿ ಡಿಎನ್ಎ  ವರದಿ ಮಾಡಿದೆ.
ಈ ಪ್ರಮಾಣಪತ್ರಗಳನ್ನು ಪಡೆಯಲು ಸ್ಥಳೀಯ ಅಧಿಕಾರಿಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.
"ಗ್ರಾಮೀಣ ನೈರ್ಮಲೀಕರಣ ನಿಧಾನಗತಿಯಲ್ಲಿ ಸಾಗಿರುವುದು ನನಗೆ ದುಃಖ ತಂದಿದೆ. ಕಳೆದ ಎರಡು ವರ್ಷಗಳ ಕಾಲಮಿತಿಯಲ್ಲಿ ಗ್ರಾಮೀಣ ಭಾಗದ ಪುದುಚೇರಿಯನ್ನು ಸ್ವಚ್ಚವಾಗಿಸಿದ್ದ ಸ್ಥಳೀಯ ಪ್ರತಿನಿಧಿಗಳನ್ನಾಗಲಿ, ಸಂಬಂಧಪಟ್ಟ ಸಾರ್ವಜನಿಕ ಅಧಿಕಾರಿಗಳನ್ನಾಗಲಿ ನಾನು ಕಂಡಿಲ್ಲ. ಕ್ಷಮಿಸಿ, ನಾನು ಇದಕ್ಕೆ ಸಮ್ಮತಿಸಲಾರೆ" ಬೇಡಿ ಹೇಳಿದ್ದಾರೆ.
ಕಿರಣ್ ಬೇಡಿ ಅವರ ವಿವಾದಾತ್ಮಕ ಹೇಳಿಕೆ ಕುರಿತಂತೆ ಪ್ರತಿಕ್ರಯಿಸಿದ ಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಎ ಅಂಬಾಳಿಗನ್ ನಾವು ಈ ಹೇಳಿಕೆಗೆ ಸಮ್ಮತಿಸುವುದಿಲ್ಲ ಎಂದಿದ್ದಾರೆ.
ಸುದ್ದಿಗಾರರೊಡನೆ ಮಾತನಾಡಿದ ಅವರು ಬೇಡಿ ಅವರ ಹೇಳಿಕೆ ಗ್ರಾಮೀಣ ಭಾಗದ ಜನರಿಗೆ ಬೆದರಿಕೆ ಒಡ್ಡಿದೆ. ಲೆಫ್ಟಿನೆಂತ್ ಹುದ್ದೆಯಲ್ಲಿರುವ ವ್ಯಕ್ತಿ ಇಂತಹಾ ಹೇಳಿಕೆ ನಿಡುವುದು ಸೂಕ್ತವಲ್ಲ ಎಂದಿದ್ದಾರೆ.
ಗ್ರಾಮೀಣ ಭಾಗಗಳನ್ನು ಸ್ವಚ್ಚವಾಗಿಡುವುದು ಆಯಾ ಪಂಚಾಯತ್ ಅಧಿಕಾರಿಗಳು, ಪಿಡಬ್ಲ್ಯೂಡಿ ಗಳಿಗೆ ಸಂಬಂಧಿಸಿದೆ.ಗ್ರಾಮಗಳು ಸ್ವಚ್ಚವಾಗಿರದೆ ಹೋದರೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ನಗರವನ್ನು ಸ್ವಚ್ಚವಾಗಿರಿಸುವುದು ಸರ್ಕಾರದ ಜವಾಬ್ದಾರಿ. ಪಟ್ಟಣದ ಕಸ ಸ್ವಚ್ಚಗೊಳಿಸುವುದಕ್ಕಾಗಿ ಖಾಸಗಿ ಸಂಸ್ಥೆಗೆ 22 ಕೋಟಿ ರೂ. ಗುತ್ತಿಗೆ ನೀಡಲಾಗಿದೆ.ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಬಾಯಿಸಬೇಕು. ಹಾಗಾಗದಿದ್ದರೆ ಒಪ್ಪಂದವನ್ನು ರದ್ದುಪಡಿಸಲಿ. ಅದನ್ನು ಬಿಟ್ಟು ಬಡವರ ಉಚಿತ ಅಕ್ಕಿಯನ್ನು ನಿಲ್ಲಿಸುವುದು ಸರ್ಕಾರದ ಸರ್ವಾಧಿಕಾರಿತನವನ್ನು ತೋರಿಸುತ್ತದೆ.ಇದು ನಾಗರಿಕ ಕ್ರಮವಾಗುವುದಿಲ್ಲ. ವಿಷಯದ ಬಗ್ಗೆ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಪ್ರತಿಕ್ರಯಿಸಬೇಕು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT