ದೇಶ

ಸುನಂದಾ ಪುಷ್ಕರ್ ಪ್ರಕರಣ : ತರೂರ್ ವಿದೇಶಕ್ಕೆ ತೆರಳಲು ನ್ಯಾಯಾಲಯ ಅನುಮತಿ

Nagaraja AB

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ  ಕಾಂಗ್ರೆಸ್ ಮುಖಂಡ ಶಶಿ ತರೂರ್   ವಿದೇಶಕ್ಕೆ   ಪ್ರವಾಸ ಕೈಗೊಳ್ಳಲು   ಪಾಟಿಯಾಲಾ ನ್ಯಾಯಾಲಯ  ಇಂದು ಅವಕಾಶ ನೀಡಿದೆ.

ಆದಾಗ್ಯೂ, ವಿಮಾನ ಮಾಹಿತಿ ದಾಖಲೆಯಾಗಿ 2 ಲಕ್ಷ ರೂ. ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಾಲಯ ತರೂರ್ ಅವರಿಗೆ ನಿರ್ದೇಶನ ನೀಡಿದೆ.ಅದನ್ನು  ವಿದೇಶದಿಂದ ಮರಳಿದ ನಂತರ ಅದನ್ನು ಹಿಂತಿರುಗಿಸುವುದಾಗಿ  ಹೇಳಿದೆ.

ನ್ಯಾಯಾಲಯದ ಅನುಮತಿ ಇಲ್ಲದೆ ತರೂರ್ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ ಎಂದು ಈ ಹಿಂದೆ ನ್ಯಾಯಾಲಯ  ಹೇಳಿತ್ತು. ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದಲ್ಲಿ   ಜುಲೈ 7 ರಂದು ವಿಚಾರಣೆಗೆ ಹಾಜರಾಗುವಂತೆ    ಶಶಿ ತರೂರ್   ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಈ ಪ್ರಕರಣದಲ್ಲಿ ಚಾರ್ಚ್ ಶೀಟ್ ದಾಖಲಿಸಲಾಗಿತ್ತು.

ಮೇ 24 ರಂದು ದೆಹಲಿ ನ್ಯಾಯಾಲಯ ಈ  ಪ್ರಕರಣದ ವಿಚಾರಣೆಯನ್ನು ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ದೆಹಲಿ ಪೊಲೀಸರು ಮೇ 14 ರಂದು ದಾಖಲಿಸಿದ  ಜಾರ್ಜ್ ಶೀಟ್ ನಲ್ಲಿ  ತರೂರ್  ಹೆಸರನ್ನು ಸೇರಿಸಲಾಗಿತ್ತು.

ಚಾರ್ಜ್ ಶೀಟ್ ನಲ್ಲಿ ತಮ್ಮ ಹೆಸರಿರುವುದು ಅಸಮಂಜಸವಾಗಿದೆ ಎಂದು  ಶಶಿ ತರೂರ್ ಹೇಳಿಕೆ ನೀಡಿದ್ದರು.

ಜ.17, 2014 ರಂದು ದೆಹಲಿಯಲ್ಲಿನ ಪೈವ್ ಸ್ಟಾರ್ ಹೋಟೆಲ್ ವೊಂದರಲ್ಲಿ ಮಧ್ಯರಾತ್ರಿಯಲ್ಲಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.

SCROLL FOR NEXT