ಸಂಗ್ರಹ ಚಿತ್ರ 
ದೇಶ

ಪೋನ್‌ನಲ್ಲಿ ಮಾತಾಡಿಲ್ಲ ಅಂತ ಅಪ್ರಾಪ್ತ ಗೆಳತಿಯನ್ನೇ ಇರಿದು ಬರ್ಬರವಾಗಿ ಕೊಂದ ಪ್ರಿಯಕರ!

ಪೋನ್‌ನಲ್ಲಿ ಮಾತಾಡಲಿಲ್ಲ ಅಂತ ತನ್ನ ಅಪ್ರಾಪ್ತ ಗೆಳತಿಯನ್ನೇ ಪ್ರಿಯಕರ ಬರ್ಬರವಾಗಿ ಕೊಂದಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ...

ಜಬಲ್ಪುರ್: ಪೋನ್‌ನಲ್ಲಿ ಮಾತಾಡಲಿಲ್ಲ ಅಂತ ತನ್ನ ಅಪ್ರಾಪ್ತ ಗೆಳತಿಯನ್ನೇ ಪ್ರಿಯಕರ ಬರ್ಬರವಾಗಿ ಕೊಂದಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. 
ತಿಲ್ಗಾವನ್ ಗ್ರಾಮದ 16 ವರ್ಷದ ಅಪ್ರಾಪ್ತಾ ಬಾಲಕಿ ಜೊತೆ 22 ವರ್ಷದ ಅಮಿತ್ ಬುರ್ಮಾನ್ ಸಂಬಂಧ ಇಟ್ಟುಕೊಂಡಿದ್ದ. ಇದರಿಂದಾಗಿ ಬಾಲಕಿಯ ಪೋಷಕರು ಆತನನೊಂದಿಗೆ ಪೋನ್ ನಲ್ಲಿ ಮಾತನಾಡಬೇಡ ಎಂದು ಹೇಳಿದ್ದಾರೆ. 
ಕಳೆದ ರಾತ್ರಿ ಅಮಿತ್ ಸಾಕಷ್ಟು ಬಾರಿ ಗೆಳತಿಗೆ ಫೋನ್ ಮಾಡಿದ್ದಾನೆ. ಆಗ ಬಾಲಕಿ ಫೋನ್ ತೆಗೆದಿರಲಿಲ್ಲ. ಇದರಿಂದ ಕೋಪಗೊಂಡ ಅಮಿತ್ ಆಕೆಯ ತಂಗಿಗೆ ಪೋನ್ ಮಾಡಿ ಪೋನ್ ಮಾಡಿ ಮಾತನಾಡುವಂತೆ ತಿಳಿಸಿದ್ದಾನೆ. 
ಇದಾದ ಬಳಿಕವೂ ಬಾಲಕಿ ಫೋನ್ ಮಾಡಿಲ್ಲ ಅಂತ ಕೋಪಗೊಂಡ ಅಮಿತ್ ಇಂದು ಆಕೆಯ ಮನೆಗೆ ಹೋಗಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 
ಈ ವೇಳೆ ಬಾಲಕಿಯ ತಂದೆ ಮನೆಯಲ್ಲಿರಲಿಲ್ಲ. ಮಗಳನ್ನು ಕೊಂದಿರುವುದನ್ನು ಕಂಡ ತಾಯಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಬಂದು ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!