ನ್ಯಾಯಾಧೀಶರ ಬಡ್ತಿ : 2 ಹೆಸರುಗಳನ್ನು ಅಂತಿಮಗೊಳಿಸಲಿರುವ ಸರ್ಕಾರ, ನ್ಯಾ.ಜೋಸೆಫ್ ಕುರಿತು ಇನ್ನೂ ಇಲ್ಲ ನಿರ್ಧಾರ
ನ್ಯಾಯಾಧೀಶರ ಪದೋನ್ನತಿಗೆ ಸಂಬಂಧಿಸಿದಂತೆ ಮತ್ತೆ ಕಾರ್ಯೋನ್ಮುಖವಾಗಿರುವ ಕೇಂದ್ರ ಸರ್ಕಾರ, 2 ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಆದರೆ ಈ ಹಿಂದೆಯೂ ವಿವಾದಕ್ಕೊಳಗಾಗಿದ್ದ ನ್ಯಾ. ಕೆಎಂ ಜೋಸೆಫ್ ಹೆಸರನ್ನು ಅಂತಿಮಗೊಳಿಸುವುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾ. ಇಂದಿರಾ ಬ್ಯಾನರ್ಜಿ, ಒಡಿಶಾದ ಹೈಕೋರ್ಟ್ ನ ಮುಖ್ಯ ನ್ಯಾ. ವಿನೀತ್ ಸರಣ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆಯುವ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದ್ದರೆ, ನ್ಯಾ. ಕೆಎಂ ಜೋಸೆಫ್ ನೇಮಕಾತಿಯ ಕಡತವನ್ನು ವಿಳಂಬ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉಳಿದ ಇಬ್ಬರೂ ನ್ಯಾಯಾಧೀಶರ ಕಡತಗಳನ್ನು ಕಾನೂನು ಸಚಿವಾಲಯ ಅಂತಿಮ ಆದೇಶಕ್ಕಾಗಿ ಪ್ರಧಾನಿ ಕಚೇರಿಗೆ ಕಳಿಸಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಎನ್ ಡಿಟಿವಿ ವರದಿಯ ಪ್ರಕಾರ ಕೊಲಿಜಿಯಂ ಮಾತ್ರ ಎರಡನೇ ಶಿಫಾರಿಸ್ಸಿನಲ್ಲಿಯೂ ತನ್ನ ಆಯ್ಕೆಯನ್ನು ಯಥಾವತ್ ಮಂಡಿಸಲಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ಕೊಲಿಜಿಯಂ ಎರಡನೇ ಬಾರಿಗೂ ತನ್ನ ಶಿಫಾರಸ್ಸನ್ನು ಬದಲಾವಣೆ ಮಾಡದೇ ಯಥಾವತ್ ಕೇಂದ್ರ ಸರ್ಕಾರಕ್ಕೆ ನೀಡಿದ್ದೇ ಆದಲ್ಲಿ ಅದನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಈ ಇಬ್ಬರು ನ್ಯಾಯಾಧೀಶರು ಹಾಗೂ ಈ ಹಿಂದೆಯೇ ಶಿಫಾರಸ್ಸು ಮಾಡಲಾಗಿದ್ದ ನ್ಯಾ. ಕೆ.ಎಂ ಜೋಸೆಫ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸ್ಸು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics