ಸಾಂದರ್ಭಿಕ ಚಿತ್ರ 
ದೇಶ

ಮೊಬೈಲ್ ತಯಾರಕರಿಗೆ, ಆಪರೇಟರುಗಳಿಗೆ ಹೆಲ್ಪ್ ಲೈನ್ ಸಂಖ್ಯೆ ಸೇರಿಸುವಂತೆ ಸೂಚಿಸಿಲ್ಲ: ಯುಐಡಿಎಐ

ಮೊಬೈಲ್ ತಯಾರಕರಿಗೆ ಅಥವಾ ಟೆಲಿಕಾಂ ಆಪರೇಟರುಗಳಿಗೆ ಐಡಿ ಕಾರ್ಡ್ ಯೋಜನೆಗಾಗಿ ತನ್ನ ಹೆಲ್ಪ್ ಲೈನ್....

ನವದೆಹಲಿ: ಮೊಬೈಲ್ ತಯಾರಕರಿಗೆ ಅಥವಾ ಟೆಲಿಕಾಂ ಆಪರೇಟರುಗಳಿಗೆ ಐಡಿ ಕಾರ್ಡ್ ಯೋಜನೆಗಾಗಿ ತನ್ನ ಹೆಲ್ಪ್ ಲೈನ್ ಸಂಖ್ಯೆಯನ್ನು ಫೋನ್ ಗಳಲ್ಲಿ ಸೇರಿಸಲು ಸೂಚಿಸಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಶುಕ್ರವಾರ ಸ್ಪಷ್ಟಪಡಿಸಿದೆ.
ಸ್ಮಾರ್ಟ್ ಫೋನ್ ಗಳಲ್ಲಿ ಯುಐಡಿಎ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ  '1800-300-1947' ಡಿಫಾಲ್ಟ್ ಆಗಿ ಸೇವ್ ಆಗಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. 
ಈ ಕುರಿತು ಪ್ರಕಟಣೆ ನೀಡಿರುವ ಯುಐಡಿಎಐ, ಇಂದು ಫೋನ್ ಗಳಲ್ಲಿ ಕಂಡು ಬಂದಿರುವ ಸಂಖ್ಯೆ 18003001947 ಯುಐಡಿಎಐ ಅಧಿಕೃತ ಟೋಲ್ ಫ್ರೀ ಸಂಖ್ಯೆಯಲ್ಲ. ಕೆಲ ಸ್ಥಾಪಿತ ಹಿತಾಸಕ್ತಿಗಳು ಅನಗತ್ಯ ಗೊಂದಲವೇರ್ಪಡಿಸಲು ಯತ್ನಿಸುತ್ತಿವೆ. ನಮ್ಮ ಅಧಿಕೃತ ಟೋಲ್ ಫ್ರೀ ಸಂಖ್ಯೆ 1947 ಆಗಿದ್ದು, ಅದು ಕಳೆದ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಚಾಲ್ತಿಯಲ್ಲಿದೆ ಎಂದು ಸ್ಪಷ್ಟಪಡಿಸಿದೆ.
ಟೆಲಿಕಾಂ ಆಪರೇಟರುಗಳು ಸೇರಿದಂತೆ ಯಾವುದೇ ಮೊಬೈಲ್ ತಯಾರಕರಿಗೆ ಸಾರ್ವಜನಿಕ ಸಹಾಯವಾಣಿ ಸಂಖ್ಯೆಗಳನ್ನು ಡಿಫಾಲ್ಟ್ ಆಗಿ ಸೇರಿಸುವಂತೆ ನಾವು ಸಲಹೆ ಅಥವಾ ಸೂಚನೆ ನೀಡಿಲ್ಲ ಎಂದು ಯುಐಡಿಎಐ ಹೇಳಿದೆ.
ಯುಐಡಿಎಐನ ಹಿಂದಿನ ಸಹಾಯವಾಣಿ ಸಂಖ್ಯೆ 1800-300-1947 ಅನ್ನು ಬದಲಾಯಿಸಿ 1947 ಮಾಡಿದೆ ಹಾಗೂ ಇದೇ ಸಂಖ್ಯೆ ಜನರ ಫೋನ್ ಬುಕ್ ಗಳಲ್ಲಿ ಸೇವ್ ಆಗಿದೆ. ಹಲವಾರು ಮಂದಿ ಈ ಸಂಖ್ಯೆ ತಮ್ಮ ಫೋನ್ ನಲ್ಲಿ ಇರುವುದನ್ನು ನೋಡಿ ಸ್ಕ್ರೀನ್ ಶಾಟ್ ನೊಂದಿಗೆ ಟ್ವೀಟ್ ಕೂಡ ಮಾಡಿದ್ದಾರೆ.
ಇನ್ನು ಫ್ರೆಂಚ್ ಸೆಕ್ಯುರಿಟಿ ತಜ್ಞ ಇಲಿಯಟ್ ಆಲ್ಡರ್ಸನ್ ಈ ಬಗ್ಗೆ ಟ್ವೀಟ್ ಮಾಡಿ "ವಿವಿಧ ಟೆಲಿಕಾಂ ಸೇವಾ ಪೂರೈಕೆದಾರರ ಗ್ರಾಹಕರಾಗಿರುವ ಹಲವಾರು ಜನರು, ಆಧಾರ್ ಇದ್ದವರೂ ಇಲ್ಲದವರೂ ಹಾಗೂ ಆಧಾರ್ ಆಯಪ್ ಇನ್‍ಸ್ಟಾಲ್ ಮಾಡಿದವರೂ ಇಲ್ಲದವರೂ ನಿಮ್ಮ ಫೋನ್ ಸಂಖ್ಯೆ ಅವರ ಕಾಂಟಾಕ್ಟ್ ಲಿಸ್ಟ್ ನಲ್ಲಿ ಡಿಫಾಲ್ಟ್ ಮೂಲಕ ಸೇವ್ ಆಗಿದೆ ಎಂಬುದನ್ನು ಗಮನಿಸಿದ್ದಾರೆ. ಇದಕ್ಕೆ ಕಾರಣ ನೀಡುವಿರಾ?,'' ಎಂದು ವಿಶಿಷ್ಟ ಗುರುತು ಪ್ರಾಧಿಕಾರವನ್ನು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT