ಶ್ರೀನಗರ: ಜಮ್ಮು-ಕಾಶ್ಮೀರದ ಸೋಪೋರ್ ಜಿಲ್ಲೆಯ ಡ್ರುಸು ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾನ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರಗಾಮಿಗಳು ಹತರಾಗಿದ್ದಾರೆ.
ಗಸ್ತು ಕಾರ್ಯ ನಡೆಸುತ್ತಿದ್ದ ಭದ್ರತಾ ಪಡೆ ಯೋಧರಿಗೆ ಉಗ್ರಗಾಮಿಗಳ ಚಲನವಲದ ಬಗ್ಗೆ ಸುಳಿವು ಸಿಕ್ಕಿ ಪ್ರದೇಶವನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ಮಳೆಗರೆಯಲು ಆರಂಭಿಸಿದರು. ಎರಡೂ ಕಡೆಯಿಂದ ತೀವ್ರ ಗುಂಡಿನ ಚಕಮಕಿ ನಡೆಯಿತು. ಅದರಲ್ಲಿ ಸಿಲುಕಿಹಾಕಿಕೊಂಡಿದ್ದ ಇಬ್ಬರು ಉಗ್ರರು ಹತರಾಗಿದ್ದಾರೆ.
ಗುಂಡಿನ ದಾಳಿ ಮುಂದುವರಿದಿದೆ ಎಂದು ಸೇನಾಪಡೆ ಮೂಲಗಳಿಂದ ತಿಳಿದುಬಂದಿದೆ.