ದೇಶ

ಶಾಲಾ ಶಿಕ್ಷಣ ಗುಣಮಟ್ಟ ಆಧರಿಸಿ ರಾಜ್ಯಗಳಿಗೆ ಗ್ರೇಡ್ ನೀಡಲು ಕೇಂದ್ರ ನಿರ್ಧಾರ

Lingaraj Badiger
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಶಾಲಾ ಶಿಕ್ಷಣದಲ್ಲಿ ಫಲಿತಾಂಶ, ಆಡಳಿತ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿನ ಗುಣಮಟ್ಟ ಆಧರಿಸಿ ರಾಜ್ಯಗಳಿಗೆ ಗ್ರೇಡ್ ನೀಡುವ ವ್ಯವಸ್ಥೆ ಜಾರಿಗೆತರುವ ಪ್ರಕ್ರಿಯೆಯಲ್ಲಿ ತೊಡಗಿದೆ.
ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣದಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿದ್ದು, ಉತ್ತಮ ಗ್ರೇಡ್ ಪಡೆಯುವ ರಾಜ್ಯಗಳು ಸಮಗ್ರ ಶಿಕ್ಷಣ ಅಭಿಯಾನದಡಿ ವಿಶೇಷ ಅನುದಾನ ಪಡೆಯಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಲಿಕೆ, ಪ್ರವೇಶ ಮತ್ತು ಗುಣಮಟ್ಟ, ಶಾಲೆಗಳ ನಿರ್ವಹಣೆ ಮತ್ತು ಶಿಕ್ಷಕರ ನೇಮಕ ಮತ್ತು ಉತ್ತೇಜನೆಯ ವಿಷಯದಲ್ಲಿನ ಫಲಿತಾಂಶ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಗ್ರೇಡ್ ನೀಡಲಾಗುವುದು. ಈಗಾಗಲೇ ವಿದೇಶಗಳಲ್ಲಿ ಇಂತಹ ಮೌಲ್ಯಮಾಪನಗಳು ವ್ಯಾಪಕವಾಗಿ ಬಳಸಲ್ಪಡುತ್ತವೆ ಎಂದು ಅವರು ಹೇಳಿದ್ದಾರೆ.
ಮೌಲ್ಯಮಾಪನಕ್ಕಾಗಿ 70 ಸೂಚಕರನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT