ಚಿದಂಬರಂ ಮತ್ತು ಕಾರ್ತಿ ಚಿದಂಬರಂ 
ದೇಶ

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಕಾರ್ತಿ ಅವರನ್ನು ಅ.8ರವರೆಗೆ ಬಂಧಿಸುವಂತಿಲ್ಲ, ದೆಹಲಿ ನ್ಯಾಯಾಲಯ ಆದೇಶ

ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಮತ್ತು ಆತನ ಮಗ ಕಾರ್ತಿಗೆ ಸಿಬಿಐ ಮತ್ತು ಇಡಿ ಹೂಡಿದ್ದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದ ಸಂಬಂಧ ಅಕ್ಟೋಬರ್ 8ರವರೆಗೆ ಬಂಧನನಕ್ಕೆ ಅವಕಾಶವಿಲ್ಲ....

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಮತ್ತು ಆತನ ಮಗ ಕಾರ್ತಿಗೆ ಸಿಬಿಐ ಮತ್ತು ಇಡಿ ಹೂಡಿದ್ದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದ ಸಂಬಂಧ  ಅಕ್ಟೋಬರ್ 8ರವರೆಗೆ ಬಂಧನನಕ್ಕೆ ಅವಕಾಶವಿಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿದೆ.ನ್ಯಾಯಾಲಯವು  ಚಿದಂಬರಂ ಹಾಗೂ ಅವರ ಪುತ್ರನಿಗೆ ನಿಡಿದ್ದ ಬಂಧನದ ವಿರುದ್ಧ ಮಧ್ಯಾವಧಿ ರಕ್ಷಣೆ ಅವಧಿಯನ್ನು ಅಕ್ಟೋಬರ್ ಎಂಟರವರೆಗೆ ವಿಸ್ತರಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಅಕ್ಟೋಬರ್ 8ಕ್ಕೆ ಪ್ರಕರಣದ ವಿಚಾರಣೆ ಅನ್ಡೆಸುವುದಾಗಿ ಹೇಳಿದ್ದಾರೆ. ಪ್ರಕರಣದಲ್ಲಿ ವಾದ ಮಂಡಿದಬೇಕಿದ್ದ ಮುಖ್ಯ ವಕೀಲರಿಗೆ ಅನಾರೋಗ್ಯವಿದ್ದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ನ್ಯಾಯಾಲಯಕ್ಕೆ ಹೆಚ್ಚುವರಿ ಸಮಯಾವಕಾಶ ನೀಡುವಂತೆ ವಕೀಲರು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ನಿಗದಿಪಡಿಸಿದೆ.
ಕೆ.ಕೆ. ಗೋಯೆಲ್ ಮತ್ತು ನಿತೀಶ್ ರಾಣಾ ಅವರುಗಳು ನ್ಯಾಯಾಲಯಕ್ಕೆ ಅರಿಕೆ ಮಾಡಿದ್ದಾರೆ. ಚಿದಂಬರಂ ಅವರ ವಕೀಲ ಅರ್ಷ್ ದೀಪ್ ಸಿಂಗ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದು ಏಜೆನ್ಸಿಗಳ ವಿವರವಾದ ವರದಿ ಪಡೆಯಲುಇನ್ನಷ್ಟು ಕಾಲಾವಕಾಶ ಬೇಕಿದೆ ಎಂದು ಕೇಳಿದ್ದಾರೆ.\
ಜುಲೈ 19 ರಂದು ಕೇಂದ್ರೀಯ ತನಿಖಾ ದಳ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಚಿದಂಬರಂ ಮತ್ತು ಅವರ ಮಗ ಕಾರ್ತಿ ಅವರನ್ನು ಹೆಸರಿಸಲಾಗಿದೆ. ಇದಲ್ಲದೆ ವಿಶೇಷ ನ್ಯಾಯಾಧೀಶರ ಮುಂದೆ ಸಿಬಿಐ ಪೂರಕ ಆರೋಪಪಟ್ಟಿ ಸಲ್ಲಿಸಿದ್ದು ಇದನ್ನು ಜುಲೈ 31 ರಂದು ಪರಿಗಣಿಸಬೇಕೆಂದು ನ್ಯಾಯಾಲಯ ನಿರ್ಧರಿಸಿದೆ.
2006 ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಚಿದಂಬರಂ ಅಕ್ರಮವಾಗಿ  ವಿದೇಶಿ ಹೂಡಿಕೆ ಪ್ರಚಾರ ಮಂಡಳಿ (ಎಫ್ಐಪಿಬಿ) ಅನುಮೋದನೆಯನ್ನು ನಿಡಿದ್ದಾರೆ. ಇವರು ಏರ್ಸೆಲ್ ಮ್ಯಾಕ್ಸಿಸ್ ಒಪ್ಪಂದಕ್ಕೆ 3,500 ಕೋಟಿ ರೂ. ಹಾಗೂ ಐಎನ್ಎಕ್ಸ್ ಮೀಡಿಯಾ ಗಾಗಿ 305 ಕೋಟಿ ರೂ. ಅಕ್ರಮ ಹಣ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel