ದೇಶ

ಕರುಣಾನಿಧಿ 5 ದಶಕಗಳ ರಾಜಕೀಯ ಪಯಣ ಅಂತ್ಯ: ಕಲೈನಾರ್ ನಡೆದುಬಂದ ಹಾದಿ

Lingaraj Badiger
ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಐದು ದಶಕಗಳ ರಾಜಕೀಯ ಪಯಣ ಮಂಗಳವಾರ ಅಂತ್ಯವಾಗಿದ್ದು,  ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕಲೈನಾರ್ ಅವರು ನಡೆದು ಬಂದ ಹಾದಿ...
ಜೂನ್ 3,1924: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈಯಲ್ಲಿ ಜನಿಸಿದ ಕರುಣನಾಧಿಯ ಮೊದಲ ಹೆಸರು ದಕ್ಷಿಣಾಮೂರ್ತಿ
1938: ಜಸ್ಟಿಸ್ ಪಾರ್ಟಿ ಸೇರ್ಪಡೆ, ಬಳಿಕ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಸೇರಿ ಹಿಂದಿ ವಿರೋಧಿ ಪ್ರತಿಭಟನೆಯಲ್ಲಿ ಭಾಗಿ.
1942ರಲ್ಲಿ 8 ಪುಟಗಳ ಕೈಬರಹದ ದಿನಪತ್ರಿಕೆ ಮಾನವರ್ ನೇಸನ್ ಆರಂಭ. ಬಳಿಕ ಮುರಸೋಳಿಯಾಗಿ ಬದಲಾವಣೆ. ಮುರಸೋಳಿ ಈಗ ಡಿಎಂಕೆಯ ಅಧಿಕೃತ ದಿನಪತ್ರಿಕೆ.
1944ರಲ್ಲಿ ಜ್ಯೂಪಿಟರ್ ಚಿತ್ರಕ್ಕೆ ಚಿತ್ರಕಥೆ ಬರೆದರು.
1947ರಲ್ಲಿ ಕರುಣಾನಿಧಿ ಚಿತ್ರಕಥೆ ಬರೆದ ಮೊದಲ ಚಿತ್ರ ರಾಜಕುಮಾರಿ ಬಿಡುಗಡೆ
1952ರಲ್ಲಿ ಕರುಣಾನಿಧಿ ಕಥೆ ಬರೆದ ರಾಜಕೀಯ ವಸ್ತುವುಳ್ಳ 'ಪರಾಶಕ್ತಿ' ಸಿನಿಮಾ ತಮಿಳುಚಿತ್ರರಂಗದ ದಿಕ್ಕು ಬದಲಿಸಿತು. ಇದು ಯಶಸ್ವಿ ಚಿತ್ರವಾದರೂ ಒಂದು ವರ್ಗದ ವಿರೋಧಕ್ಕೆ ಕಾರಣವಾಗಿ ವಿವಾದ ಸೃಷ್ಟಿಸಿತು.
1957ರಲ್ಲಿ ಕುಲಿತಲೈ ಕ್ಷೇತ್ರದ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆಗೆ ಪ್ರವೇಶ.
1961ರಲ್ಲಿ ಡಿಎಂಕೆ ಖಜಾಂಚಿಯಾಗಿ ನೇಮಕ
1961ರಲ್ಲಿ ಪ್ರತಿಪಕ್ಷ ಉಪ ನಾಯಕನಾಗಿ ಆಯ್ಕೆ
1967ರಲ್ಲಿ ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದುರೈ ಸಂಪುಟದಲ್ಲಿ ಲೋಕೋಪಯೋಗಿ ಸಚಿವ ಸೇವೆ.
1969ರಲ್ಲಿ ಅಣ್ಣಾದುರೈ ಸಾವಿನ ನಂತರ ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ.
2001ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಕರುಣಾನಿಧಿ ಅವರನ್ನು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ಬಂಧಿಸಿತ್ತು.
2006ರಲ್ಲಿ ಐದನೇ ಬಾರಿ ತಮಿಳುನಾಡು ಮುಖ್ಯಮಂತ್ರಿ.
SCROLL FOR NEXT