ನವದೆಹಲಿ: ನೀವು ಸೂಟು-ಬೂಟು ಹಾಕಿರುವ ಮಾಣಿಯಂತೆ ಕಾಣುತ್ತೀರಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟಾಂಗ್ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಶಶಿ ತರೂರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸ್ವಾಮಿ, ನಿಮ್ಮ ಸೂಟು ಬೂಟು ಕೂಡ ನಮಗೆ ಹೊಸತಲ್ಲ, ಸೂಟಿನಲ್ಲಿ ನೀವು ವೇಟರ್ ರೀತಿ ಕಾಣುತ್ತೀರಿ ಎಂದು ಛೇಡಿಸಿದ್ದಾರೆ.
ಇನ್ನೂ ಪ್ರಧಾನಿ ಮೋದಿ ಅವರ ಬಗ್ಗೆ ತರೂರ್ ನೀಡಿರುವ ಹೇಳಿಕೆಗೆ ಬಿಜೆಪಿಯ ಹಲವು ಮುಖಂಡರು ಹರಿ ಹಾಯ್ದಿದ್ದಾರೆ. ತರೂರ್ ಅವರು, ಉತ್ತರ ಭಾರತ ಮತ್ತು ಈಶಾನ್ಯ ಭಾಗದ ಜನತೆಯ ಕ್ಷಮೆ ಕೋರಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆಗ್ರಹಿಸಿದ್ದಾರೆ.
ಈಶಾನ್ಯ ಭಾರತ ಜನರ ಹಾಗೂ ಬುಡಕಟ್ಟು ಜನಾಂಗದವರಿಗೆ ಅವಮಾನ ಮಾಡಿದ್ದಾರ ಎಂದು ಆರೋಪಿಸಿದ್ದಾರೆ.