ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಾಜಿ ಸಿಎಂ ಕರುಣಾನಿಧಿ ತಂದೆ ಸಮಾನರು, ಅವರ ಸಾವು ಅತೀವ ದುಃಖ ತಂದಿದೆ: ಸೋನಿಯಾ ಗಾಂಧಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ನಿಧನಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ...

ಸೋನಿಯಾ ಗಾಂಧಿ
Vishwanath S
Updated On : 8 Aug 2018, 7:44 am
ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ನಿಧನಕ್ಕೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದಾರೆ. 
ಕರುಣಾನಿಧಿ ಅವರು ತಂದೆ ಸಮಾನರು. ಶ್ರೇಷ್ಠ ದಯೆ ಮತ್ತು ಪರಿಗಣನೆಯನ್ನು ತೋರಿಸುತ್ತಿದ್ದರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. 
ಸೋನಿಯಾ ಗಾಂಧಿ ತಮ್ಮ ಮಗ ರಾಹುಲ್ ಗಾಂಧಿ ಅವರ ಕೈಯಲ್ಲಿ ಸ್ಟಾಲಿನ್ ಗೆ ಕಳುಹಿಸಿರುವ ಪತ್ರದಲ್ಲಿ ನಿಮ್ಮ ಗೌರವಾನ್ವಿತ ಮತ್ತು ಪ್ರೀತಿಯ ತಂದೆ ವಿಧಿವಶರಾಗಿರುವುದಕ್ಕೆ ನಾನು ದುಃಖಿತನಾಗಿದ್ದೇನೆ. ಕರುಣಾನಿಧಿ ನಿಧನ ಬಹಳ ನಷ್ಟವನ್ನುಂಟ್ಟು ಮಾಡಿದೆ. ಅವರು ಯಾವಾಗಲೂ ನನಗೆ ಕರುಣೆಯನ್ನು ಮತ್ತು ಪರಿಗಣನೆಯನ್ನು ತೋರಿಸಿದರು. ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. 

Advertisement

Advertisement

ಇದೇ ವೇಳೆ, ಕಲೈಗ್ನರ್ ಅವರು ತಮಿಳುನಾಡು ಮತ್ತು ರಾಷ್ಟ್ರ ರಾಜಕೀಯ ಮತ್ತು ಸಾರ್ವಜನಿಕ ಸೇವೆಯಲ್ಲಿನ ಅತ್ಯುನ್ನತ ವ್ಯಕ್ತಿ ಎಂದು ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement