ಕರುಣಾ ನಿಧಿ 
ದೇಶ

ಕನ್ನಡಿಗರೊಬ್ಬರು ಪ್ರಧಾನಿಯಾಗುವ ಭರವಸೆ ನೀಡಿದ್ದ ಕರುಣಾನಿಧಿ: ಡಾ. ರಾಜ್ ಬಿಡುಗಡೆಗಾಗಿ ಪಟ್ಟ ಶ್ರಮ ಅಷ್ಟಿಷ್ಟಲ್ಲ!

: ನಾನು ನನ್ನ ದೊಡ್ಡಣ್ಣನನ್ನು ಇಂದು ಕಳೆದುಕೊಂಡಿದ್ದೇನೆ, ದೇಶದ 11ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಲು ಅವರು ಅಪಾರ ಶ್ರಮ ಪಟ್ಟಿದ್ದರು 1996 ರಲ್ಲಿ ...

ಬೆಂಗಳೂರು: ನಾನು ನನ್ನ ದೊಡ್ಡಣ್ಣನನ್ನು ಇಂದು ಕಳೆದುಕೊಂಡಿದ್ದೇನೆ,  ದೇಶದ 11ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಲು  ಅವರು ಅಪಾರ ಶ್ರಮ ಪಟ್ಟಿದ್ದರು  1996 ರಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ನನ್ನ ಹೆಸರನ್ನು ಅವರು ಸೂಚಿಸಿದ್ದರು ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕರಣಾನಿಧಿ ಅವರನ್ನು ಸ್ಮರಿಸಿದ ಪರಿ ಇದು.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತೀರಾ ಸ್ವಾರ್ಥಿಯಂತೆ ವರ್ತಿಸಿದರೂ ಕರುಣಾನಿಧಿ ರಾಜ್ಯದ ಹಲವು ನಾಯಕರ ಮೇಲೆ ತಮ್ಮ ಪ್ರಭಾವ ಬೀರಿದ್ದರು. ಹಿಂದುಳಿದ ವರ್ಗಗಳ ಬಗ್ಗೆ ಅವರಿಗಿದ್ದ ಸಹಾನೂಭೂತಿ, ದೇವೇಗೌಡ ಪ್ರಧಾನ ಮಂತ್ರಿಯನ್ನಾಗುವಂತೆ ಮಾಡಿತು. 
ಮಾಜಿ ಪ್ರದಾನಿ ಮತ್ತು ಕರುಣಾ ನಿಧಿ ಅವರನ್ನು 50 ವರ್ಷಗಳ ಸ್ನೇಹ, ಕರುಣಾನಿಧಿ ಅವರನ್ನು ದೇವೇಗೌಡರು ಹಿರಿಯಣ್ಣ  ಎಂದು ಕರೆಯುತ್ತಿದ್ದರು.
ಇನ್ನೂ ಕುಖ್ಯಾತ ದಂತ ಚೋರ ವೀರಪ್ಪನ್  ವರನಟ ಡಾ. ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ ವೇಳೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ವಹಿಸಿದ್ದ ಪಾತ್ರ ಗಣ್ಯವಾದದ್ದು. ರಾಜ್ ಅವರನ್ನು ವೀರಪ್ಪನ್ ಅವರಿಂದ ಬಿಡುಗಡೆಗೊಳಿಸಲು ಅವರು ಹಲವು ರೀತಿಯಲ್ಲಿ ಶ್ರಮಿಸಿದ್ದರು ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಪಿ,ಜಿ ಆರ್ ಸಿಂಧ್ಯಾ ಹೇಳಿದ್ದಾರೆ.
ರಾಜ್ ಕುಮಾರ್ ಕಿಡ್ನಾಪ್ ಆಗಿದ್ದಾಗ ರಾಜ್ಯದಲ್ಲಿ ಸಿಎಂ ಆಗಿ ಎಸ್ ಎಂ ಕೃಷ್ಣ ಅಧಿಕಾರದಲ್ಲಿದ್ದರು. ರಾಜ್ ಬಿಡುಗಡೆಗೆ ಅಗತ್ಯ ಎಲ್ಲಾ ಕ್ರಮ ಕೈಗೊಂಡಿದ್ದರು ಎಂದು ಸಿಂಧ್ಯಾ ತಿಳಿಸಿದ್ದಾರೆ. ರಾಜ್ ಬಿಡುಗಡೆಗಾಗಿ ಕರುಣಾನಿಧಿ ಅವರು ಅಪಾರ ಶ್ರಮ ಪಟ್ಟಿದ್ದರು ಎಂದು ಪಾರ್ವತಮ್ಮ, ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕರುಣಾನಿಧಿ ಅವರನ್ನು ಹೊಗಳಿದ್ದರು.
ಕರುಣಾನವಿಧಿ ಅವರ ಒಬ್ಬಳು ಪುತ್ರಿ ಬೆಂಗಳೂರಿನ ಜಯನಗರದಲ್ಲಿ ವಾಸವಾಗಿದ್ದು, ಅಂತಿಮ ದರ್ಶನಕ್ಕಾಗಿ ಚೆನ್ನೈ ದಗೆ ತೆರಳಿದ್ದಾರೆ, ಕನಕಪುರದ ಹಾರೋಹಳ್ಳಿಯಲ್ಲಿ ಕರುಣಾನಿಧಿ ಅವರ ಫಾರ್ಮ್ ಇದೆ. ಯಾವಾಗಲು ತಮ್ಮ ರಾಜ್ಯದ ಹಿತಾಸಕ್ತಿ ಬಯಸುತ್ತಿದ್ದ ಕರುಣಾನಿಧಿ ಕಾವೇರಿ ನದಿ ನೀರು ಹಂಚಿಕೆ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿರಕೊಳ್ಳಲು ಬಯಸಿದ್ದರು ಎಂದು ಸಿಂಧ್ಯ ತಿಳಿಸಿುದ್ದ್ರಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT