ಕರುಣಾನಿಧಿ 
ದೇಶ

ಕರುಣಾನಿಧಿ: 'ಚಿನ್ನದ ಮನಸ್ಸಿನ ಉಕ್ಕಿನಂತ ಆಡಳಿತಗಾರ'

ತಮಿಳುನಾಡು ಮಾಜಿ ಮುಖ್ಯಮಖ್ಯಮಂತ್ರಿ ದಿವಂಗತ ಕರುಣಾನಿಧಿ ಆಡಳಿತ ವಿಷಯಕ್ಕೆ ಬಂದರೆ ನಿಷ್ಠುರವಾದಿಯಾಗಿದ್ದರು. ತಾವು ಕೈಗೊಂಡ ಎಲ್ಲಾ ನಿರ್ಧಾರಗಳು ...

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಖ್ಯಮಂತ್ರಿ ದಿವಂಗತ ಕರುಣಾನಿಧಿ  ಆಡಳಿತ ವಿಷಯಕ್ಕೆ ಬಂದರೆ ನಿಷ್ಠುರವಾದಿಯಾಗಿದ್ದರು. ತಾವು ಕೈಗೊಂಡ ಎಲ್ಲಾ ನಿರ್ಧಾರಗಳು ಅನುಷ್ಠಾನಗೊಳ್ಳಬೇಕು ಎಂದು ಬಯಸುತ್ತಿದ್ದವರು, ತಾವು ಅಂದುಕೊಂಡ ಕೆಲಸ ಮುಗಿಯುವರವರೆಗೂ ಮಧ್ಯರಾತ್ರಿಯಾದರೂ ಬಿಡುತ್ತಿರಲಿಲ್ಲ,  ಮಧ್ಯರಾತ್ರಿ ಅಧಿಕಾರಿಗಳಿಗೆ ಕರೆ ಮಾಡಿ ಯೋಜನೆ ಬಗ್ಗೆ ಅದರ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದು ಕೆ.ಎಸ್ ಶ್ರೀಪಾತಿ ತಿಳಿಸಿದ್ದಾರೆ. 
ಕೆ.ಎಸ್ ಶ್ರೀಪಾತಿ ಕರುಣಾನಿಧಿ ಸಿಎಂ ಆಗಿದ್ದಾಗ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು,. ಕರುಣಾನಿಧಿ ಅವರ ಆಡಳಿತವಾಧಿಯಲ್ಲಿ  ಸದ್ಯ ಇರುವ  ವಿಮಾನ ನಿಲ್ದಾಣ ವಿಸ್ತರಣೆಗಾಗಿ  ನಿರ್ಧಾರ ಕೈಗೊಂಡುಪ ಅನುಮೋದನೆ ಪಡೆಯಲಾಯಿತು. ರಕ್ಷಣಾ ಇಲಾಖೆಗೆ ಸೇರಿದದ ಭೂಮಿಯನ್ನು ಇದಕ್ಕಾಗಿ ಸ್ವಾದೀನ ಪಡಿಸಿಕೊಳ್ಳಲು ಅನುಮೋದನೆ ಪಡೆಯಲಾಗಿತ್ತು. ಕರುಣಾನಿಧಿ ಕೆಲಸ ಮಾಡಲು ಬಯಸುತ್ತಿದ್ದರೇ ಹೊರತು ಅಧಿಕಾರಿಗಳ ಕೆಲಸದಲ್ಲಿ ಎಂದು ಮೂಗು ತೂರಿಸುತ್ತಿರಲಿಲ್ಲ.
2009 ರಲ್ಲಿ ಸುನಾಮಿಯ ಎಚ್ಚರಿಕೆ ನೀಡಲಾಗಿತ್ತು,  ಮಧ್ಯರಾತ್ರಿ 1 ಗಂಟೆಗೆ ಕರೆ ಮಾಡಿದರು. ಸಿಎಸ್ ಸರ್ ಎಂದು ನನ್ನನ್ನು ಕರೆಯುತ್ತಿದ್ದರು. ಜಿಲ್ಲಾಧಿಕಾರಿಗಳಿಗೆ ಎಚ್ಚರಿಸುವಂತೆ ಹೇಳಿದರು. ಅವರಿಗೆ  ಆ ಸಮಯದಲ್ಲಿ ಅನಾರೋಗ್ಯ ಕಾಡಿತ್ತು ಎಂದು ನೆನಪಿಸಿಕೊಂಡಿದ್ದಾರೆ.
2009 ರಲ್ಲಿ ಪ್ರವಾಹ ಉಂಟಾದಾಗ ಗೋಪಾಲಪುರಂ ತಲುಪಲು ನಾನು ನನ್ನ ಮನೆಯಿಂದ ಹೋಗುವವರೆಗೂ ನನಗಾಗಿ ಕಾದಿದ್ದರು. ಅವರೊಬ್ಬ ಸೃಜನಶೀಲ ವ್ಯಕ್ತಿ ಅವರೊಟ್ಟಿಗೆ ಕೆಲಸ ಮಾಡಿದ ಕ್ಷಣಗಳು ಅದ್ಭುತ, ಕರುಣಾನಿಧಿ ಬ್ರಾಹ್ಮಣ ವಿರೋಧಿ,  ಹಿಂದೂ ವಿರೋಧಿ ಎಂಬ ಸುಳ್ಳು ಸುದ್ದಿ ಹರಿದಾಡಿದ್ದವು. ಆದರೆ ಕೆಲಸದಲ್ಲಿ ಅವರು ಅಂತಹ ವರ್ತನೆಯನ್ನು ಯಾವತ್ತೂ ತೋರಲಿಲ್ಲ, ಅದಕ್ಕೆ ನಾನೇ ಉದಾಹರಣೆ ಎಂದು ಹೇಳಿದ್ದಾರೆ.
ಇನ್ನೂ ಡಿಎಂಕೆ ಆಡಳಿತಾವಧಿಯಲ್ಲಿ ಆರೋಗ್ಯ ವಿಮೆ ಯೋಜನೆ ಅನುಷ್ಟಾನಗೊಂಡಿತ್ತು. ಇದು ಕರುಣಾನಿಧಿ ಅವರಿಂದ ರೂಪುಗೊಂಡಿತ್ತು, ನನ್ನನ್ನು ಆಂಧ್ರ ಪ್ರದೇಶಕ್ಕೆ ಕಳುಹಿಸಿದ ಕರುಣಾನಿಧಿ ಅವರು ಅಲ್ಲಿ ಹೇಗೆ ಆರೋಗ್ಯ ವಿಮೆ ಯೋಜನೆ ಅಳವಡಿಸಿಕೊಂಡಿದ್ದಾರೆ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ತಿಳಿಸಿದರು. ಅಧ್ಯಯನದ ನಂತರ ವರದಿ ನೀಡಿದ ನಾನು ಅದಕ್ಕಾಗಿ 650 ಕೋಟಿ ರು ಹಣ ಬೇಕಾಗುತ್ತದೆ ಎಂದು ಹೇಳಿದೆ, ಕೂಡಲೇ ಅದನ್ನು ಅನುಷ್ಠಾನಗೊಳಿಸಿ ಎಂದು ಕರುಣಾನಿಧಿ ಹೇಳಿದ್ದರು ಎಂದು ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಸುಬ್ಬರಾಜು ತಿಳಿಸಿದ್ದಾರೆ.
ಕರುಣಾನಿಧಿ ಹಲವು ವಿಷಯಗಳಲ್ಲಿ ತುಂಬಾ ನಿಖರವಾಗಿದ್ದರು. ತಮ್ಮ ವೇತನ ಏರಿಕೆ ಮಾಡುವಂತೆ ಆಗ್ರಹಿಸಿ ವೈದ್ಯರು ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ಸುಮಾರು ಸಂಜೆ 7.30 ಕ್ಕೆ ನನಗೆ ಅವರಿಂದ ಕರೆ ಬಂತು, ವೈದ್ಯರ ಸಂಬಳ ಏರಿಕೆ ಮಾಡುವ ಫೈಲ್ ಕ್ಲಿಯರ್ ಆಗಿದೆಯೇ ಎಂದು ಕೇಳಿದರು. ಆ ಕಡತ ಸಚಿವರ ಬಳಿ ಇದೆ ಎಂದು ಹೇಳಿದೆ, ಕೂಡಲೇ ಆ ಸಚಿವರಿಗೆ ಕರೆ ಮಾಡಿದರು. ಈ ವೇಳೆ ಸಚಿವರು ರೈಲಿನಲ್ಲಿ ಚೆಂಗಲಪಟ್ಟು ಬಳಿ ಪ್ರಯಾಣಿಸುತ್ತಿದ್ದರು. ನಂತರ ಫೈಲ್ ಜೊತೆ ತಮ್ಮ ಮನೆಗೆ ಕರೆಸಿಕೊಂಡಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
ರಾತ್ರಿ 8.30 ರ ವೇಳೆಗೆ ಸಚಿವರು ಕಡತದೊಂದಿಗೆ  ಮನೆಗೆ ಬಂದರುಷ ಅದಕ್ಕೆ ಕರುಣಾನಿಧಿ ಅನುಮೋದನೆ ನೀಡಿ, ತಕ್ಷಣವೇ ಪ್ರೆಸ್ ನೋಟ್ ಸಿದ್ಧಪಡಿಸಿದರು. ರಾತ್ರಿ 10 ಗಂಟೆ ವೇಳೆಗೆ ಎಲ್ಲಾ ಪ್ರಕ್ರಿಯೆ ಮುಗಿಯಿತು. ಅಷ್ಟಕ್ಕೆ ಮುಗಿಯಲಿಲ್ಲ, ಅದು ಎಲ್ಲಾ ಮಾಧ್ಯಮಗಳಿಗೆ ತಲುಪಿತೆ ಎಂದು ವಿಚಾರಿಸಲು ತಿಳಿಸಿದರು. ರಾತ್ರಿ 11.30ಕ್ಕೆ ಮಹಡಿ ಮೇಲಕ್ಕೆ ತೆರಳಿದ ಅವರು 5 ರಿಂದ 10 ನಿಮಷ ಬಿಟ್ಟು ಕೆಳಗೆ ಬಂದರು, ಮುರಸೊಳಿಗೆ ಪ್ರೆಸ್ ರಿಲೀಸ್ ತಲುಪಿದೆಯಂತೆ ನೀವು ಹೊರಡಬಹುದು ಎಂದು ನನ್ನ ಕಳುಹಿಸಿದರು ಎಂದು ಜ್ಞಾಪಿಸಿಕೊಂಡಿದ್ದಾರೆ.
1965 ರಲ್ಲಿ ಹಿಂದಿ ಹೇರಿಕೆ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ವೇಳೆ ತಿರುವನೇಲಿಯಲ್ಲಿರುವ ಪಲಾಯಮ್ ಕೊಟ್ಟಾಯ್ ಕೇಂದ್ರ ಕಾರಾಗೃಹದಲ್ಲಿ ಸುಮಾರು 4 ತಿಂಗಳ ಕಾಲ ಕರುಣಾ ನಿಧಿ 5ನೇ ಸಂಖ್ಯೆಯ ಕೊಠಡಿಯಲ್ಲಿ  ನಂಬರ್ 1 ಕೈದಿಯಾಗಿ ಸೆರೆವಾಸ ಅನುಭವಿಸಿದ್ದರು, ಇಂಡೋ-ಪಾಕಿಸ್ತಾನ ಯುದ್ದ ಆರಂಭಕ್ಕೆ ಕೆಲವು ದಿನಗಳ ಮುನ್ನ ಅವರನ್ನು ಬಿಡುಗಡೆ ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT