3.5 ಕೋಟಿ ರು.ಗೆ ಹರಾಜಾಯ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಸುಲ್ಲಾ ಬಿಲ್ಡಿಂಗ್!
ದಕ್ಷಿಣ ಮುಂಬಯಿಯಲ್ಲಿರುವ ಪಾಕ್ಮೋಡಿಯಾ ಸ್ಟ್ರೀಟ್ ನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮಸುಲ್ಲಾ ಬಿಲ್ಡಿಂಗ್ ಸುಮಾರು 3.5 ಕೋಟಿ ರು ಗೆ ...
ಮುಂಬಯಿ: ದಕ್ಷಿಣ ಮುಂಬಯಿಯಲ್ಲಿರುವ ಪಾಕ್ಮೋಡಿಯಾ ಸ್ಟ್ರೀಟ್ ನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಮಸುಲ್ಲಾ ಬಿಲ್ಡಿಂಗ್ ಸುಮಾರು 3.5 ಕೋಟಿ ರು ಗೆ ಮಾರಾಟವಾಗಿದೆ, ಸೈಫೀ ಬುರ್ಹಾನಿ ಅಪ್ ಲಿಪ್ ಮೆಂಟ್ ಟ್ರಸ್ಟ್ ಈ ಕಟ್ಟಡವನ್ನು ಖರೀದಿಸಿದೆ.
ಮಾಧ್ಯಮಗಳ ಪ್ರಕಾರ ಬಾರದ್ವಾಜ್ ಅತಿ ಹೆಚ್ಚಿನ ಬಿಡ್ಜರ್ ಆಗಿದ್ದರು, 1.91 ಕೋಟಿ ರು ನಿಗದಿ ಪಡಿಸಿದ್ದರು, ಸಾರ್ವಜನಿಕ ಹರಾಜಿನಲ್ಲಿ ಅವರು ಭಾಗವಹಿಸಿರಲಿಲ್ಲ, ಸೀಲಡ್ ಟೆಂಡರ್ ಪ್ರಕ್ರಿಯೆ ನಡೆಯಿತು. ಇಂದಿರಾ ತಿವಾರಿ ಫೈನಲ್ ಅವರಿಗೆ ಸೇರಿದ ಟ್ರಸ್ಟ್ ಗೆ ಅಂತಿಮವಾಗಿ ಮಾರಾಟವಾಯಿತು. ಆರಂಭಿಕವಾಗಿ 25 ಲಕ್ಷ ರು ಹಣ ಡೆಪಾಸಿಟ್ ಮಾಡಿದೆ.ಸ್ಮಗ್ಲಿಂಗ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ನಿಗ್ರಹ ಕಾಯ್ದೆಯಡಿ ಹರಾಜು ಹಾಕಲಾಗಿತ್ತು,.
ಪ್ಯಾಕೋಡಿಯಾ ಬೀದಿಯಲ್ಲಿ ದಾವೂದ್ ರ ಈ ಮೂರಂತಸ್ತಿನ ಕಟ್ಟಡದಲ್ಲೇ ದಾವೂದ್ ಇಬ್ರಾಹಿಂ ತನ್ನ ದಂಧೆಯನ್ನು ನಡೆಸುತ್ತಿದ್ದ. ದಾವೂದ್ ತಾಯಿ ಅಮೀನಾ ಬೀ ಹೆಸರಿನಲ್ಲಿದ್ದ ಈ ಕಟ್ಟಡವನ್ನು ದಾವೂದ್ ಅಕ್ರಮವಾಗಿ ಸಂಪಾದಿಸಿದ್ದ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.