ದೇಶ

ದಾಂಧಲೆ ಮಾಡುವ ಕನ್ವಾರಿಯಾಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಪೊಲೀಸರಿಗೆ ಸುಪ್ರೀಂ ಆದೇಶ

Sumana Upadhyaya

ಬೆಂಗಳೂರು: ವಿಧ್ವಂಸಕ ಕೃತ್ಯಗಳನ್ನು ನಡೆಸಿ ಕಾನೂನನ್ನು ಕೈಗೆತ್ತಿಕೊಳ್ಳುವ ಕನ್ವಾರಿಯಾಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ನಿನ್ನೆ ದೆಹಲಿಯಲ್ಲಿ ಕನ್ವಾರಿಗಳು ರಸ್ತೆಯಲ್ಲಿ ಸಿಟ್ಟಿಗೆದ್ದು, ಧ್ವಂಸ ಮಾಡಿ ಮೋತಿ ನಗರ್ ನಲ್ಲಿ 10 ಹುಂಡೈ ಕಾರುಗಳನ್ನು ನಾಶಪಡಿಸಿದ್ದರು. ಈ ಸಂಬಂಧ 26 ವರ್ಷದ ಯುವಕನನ್ನು ಬಂಧಿಸಲಾಗಿದೆ.

ದೆಹಲಿಯ ಮೋತಿ ನಗರದ ಮೆಟ್ರೊ ನಿಲ್ದಾಣದ ಜನನಿಬಿಡ ಪ್ರದೇಶದಲ್ಲಿ ಕಳೆದ ಮಂಗಳವಾರ ಸಂಚಾರದಟ್ಟಣೆ ಉಂಟಾಗಿತ್ತು. ಇದರಿಂದಾಗಿ ಕೆಲ ಪ್ರಯಾಣಿಕರು ಪ್ರಯಾಣಿಸಲು ಸುತ್ತುಮಾರ್ಗವನ್ನು ಬಳಸಬೇಕಾಯಿತು.

ಆರೋಪಿ ರಾಹುಲ್ ಬಿಲ್ಲಾನನ್ನು ಸಿಸಿಟಿವಿ ಕ್ಯಾಮರಾ ಮೂಲಕ ಪತ್ತೆಹಚ್ಚಲಾಗಿದ್ದು ನಂತರ ಆತನನ್ನು ಬಂಧಿಸಲಾಯಿತು. ಬಿಲ್ಲಾ ಉತ್ತಮ ನಗರ ನಿವಾಸಿಯಾಗಿದ್ದು ಇದಕ್ಕೂ ಮುನ್ನ ಸುಲಿಗೆ, ಕಳ್ಳತನದಂತಹ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಕನ್ವಾರಿಯಾಗೆ ತಾಗಿದ ಪರಿಣಾಮ ದೆಹಲಿಯಲ್ಲಿ ಗದ್ದಲ ಉಂಟಾಗಿತ್ತು.

SCROLL FOR NEXT