ದೇಶ

ಸಿಎಂ ಪಳನಿ, ತಮಿಳುನಾಡಿನ ಇಡೀ ಸಂಪುಟ ಕರುಣಾನಿಧಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು; ರಜನಿಕಾಂತ್

Manjula VN
ಚೆನ್ನೈ: ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹಾಗೂ ತಮಿಳುನಾಡು ರಾಜ್ಯದ ಇಡೀ ಸಂಪುಟ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ರಜನಿಕಾಂತ್ ಅವರು ಮಂಗಳವಾರ ಹೇಳಿದ್ದಾರೆ. 
ಕರುಣಾನಿಧಿಗಾಗಿ ದಕ್ಷಿಣ ಭಾರತದ ಕಲಾವಿದರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಪಳನಿಸ್ವಾಮಿ ಹಾಗೂ ಅವರ ಇಡೀ ಸಂಪುಟ ಕರುಣಾನಿಧಿಯವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು. ಮರೀನಾ ಬೀಚ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡುವ ಕುರಿತಂತೆ ಕೆಲ ಪರ ಹಾಗೂ ವಿರೋಧದ ಕೂಗುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಮದ್ರಾಸ್ ಹೈಕೋರ್ಟ್ ಆದೇಶದ ಮೂಲಕ ವಿವಾದಕ್ಕೆ ಅಂತ್ಯ ಹಾಡಿತ್ತು. ಒಂದು ವೇಳೆ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸರ್ಕಾರ ಪ್ರಶ್ನಿಸಿದ್ದೇ ಆಗಿದ್ದರೆ, ಸರ್ಕಾರದ ವಿರುದ್ಧ ನಾನು ಪ್ರತಿಭಟನೆ ನಡೆಸುತ್ತಿದ್ದೆ ಎಂದು ಹೇಳಿದ್ದಾರೆ. 
ಕರುಣಾನಿಧಿಯವರ ಅಂತಿಮ ಸಂಸ್ಕಾರದಲ್ಲಿ ಇಡೀ ಭಾರತ ಬಂದಿತ್ತು. ಮೂರು ಸೇನಾ ಪಡೆಗಳಿಂದ ರಾಜ್ಯ ಸರ್ಕಾರ ಸಕಲ ಗೌರವಗಳನ್ನು ಸಲ್ಲಿಸಿತ್ತು. 21 ಗನ್ ಸೆಲ್ಯೂಟ್ ಗಳನ್ನು ಸಲ್ಲಿಸಲಾಗಿತ್ತು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಆಗಮಿಸಿದ್ದರು. ಆದರೆ, ಅಂತಿಮ ಸಂಸ್ಕಾರದ ವೇಳೆ ಒಂದೇ ಒಂದು ಕೊರತೆ ಎದ್ದು ಕಾಣುತ್ತಿತ್ತು. ತಮಿಳುನಾಡಿನ ಮೊದಲ ಪ್ರಜೆ ಮುಖ್ಯಮಂತ್ರಿಗಳು ಆಗಮಿಸಿರಲಿಲ್ಲ. ತಮಿಳುನಾಡಿನ ಇಡೀ ಸಂಪುಟ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿರಲಿಲ್ಲ. ಇದರಿಂದ ಜನತೆ ಏನೆಂದು ಆಲೋಚಿಸಬೇಕು? ನೀವೇನು ಎಂಜಿಆರ್ ಅಥವಾ ಜಯಲಲಿತಾರೇ? 

ಕರುಣಾನಿಧಿಯವರಿಂದ ಸಾವಿರಾರು ಮಂದಿ ರಾಜಕೀಯಕ್ಕೆ ಬಂದಿದ್ದರು. ನೂರಾರು ಜನರು ನಾಯಕರಾಗಿ ಬದಲಾಗಿದ್ದರು ಎಂದು ಇದೇ ವೇಳೆ ಕರುಣಾನಿಧಿಯವರನ್ನು ಕೊಂಡಾಡಿದ್ದಾರೆ. 
SCROLL FOR NEXT