ದೇಶ

ತಿರುಮಲದಲ್ಲಿ ಮಹಾಸಂಪ್ರೋಕ್ಷಣ: ಹುಂಡಿ ಆದಾಯದಲ್ಲಿ ದಾಖಲೆಯ ಕುಸಿತ!

Raghavendra Adiga
ತಿರುಪತಿ: ವಿಶ್ವ ವಿಖ್ಯಾತ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರದಿಂದ  ಐದು ದಿನಗಳ ಮಹಾಸಂಪ್ರೋಕ್ಷಣಂ ವಿಶೇಷ ಕಾರ್ಯಕ್ರಮ ಜರುಗಿತ್ತಿದ್ದು ದೇವಾಲಯದ ಹುಂಡಿ ಸಂಗ್ರಹದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾಸಂಪ್ರೋಕ್ಷಣಂ ಕಾರ್ಯಕ್ಕಾಗಿ ದೇವಾಲಯಕ್ಕೆ ಜನಸಾಮಾನ್ಯರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು ಭಕ್ತಾದಿಗಳ ಸಂಖ್ಯೆ ಇಲಿಕೆಯಾಗಿ ಹುಂಡಿ ಆದಾಯವೂ ಸಹ ಕುಸಿದಿದೆ.
ಚಿನ್ನದ ಹರಕೆ, ಕಾಣಿಕೆ ಹೊರತುಪಡಿಸಿ ದಿನವೊಂದಕ್ಕೆ ಎಲ್ಲಾ ಹುಂಡಿಗಳಲ್ಲಿ ಸಂಗ್ರಹವಾಗುತ್ತಿದ್ದ ಆದಾಯ ಸುಮಾರು ಮೂರು ಕೋಟಿಯಾಗುತ್ತಿತ್ತು. ಆದರೆ ಸೋಮವಾರದಂದು ಹುಂಡಿಯಲ್ಲಿ ಸಂಗ್ರಹವಾದ ಒಟ್ಟು ಸಂಪತ್ತು ಕೇವಲ 73 ಲಕ್ಷ ರು. ಮಾತ್ರ.
ಮಹಾಸಂಪ್ರೋಕ್ಷಣಂ ಸಂದರ್ಭದಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ವೈದಿಕ ಆಚರಣೆಗಳು ನಡೆಯಲಿದ್ದು ಐದು ದಿನಗಳ ಅಷ್ಟಬಂಧ ಬಾಲಾಲಯ ಮಹಾ ಸಂಪ್ರೋಕ್ಷಣಂ ಇದಾಗಿದೆ.ಈ ಸಮಯದಲ್ಲಿ ಬಿಂಬ ಪ್ರತಿಷ್ಟೆ, ಕಲಶಾಭಿಷೇಕವನ್ನು ವೈದಿಕ ವಿಧಿವಿಧಾನಗಳ ಮೂಲಕ  ನೆರವೇರಿಸಲಾಗುವುದು.ದೇಚಾಲಯದ ಎಲ್ಲಾ ಪ್ರಮುಖ ಅರ್ಚಕರು ಈ ಸಮಯದಲ್ಲಿ ಸನ್ನಿಧಾನದಲ್ಲಿದ್ದು ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ.
ಆದರೆ ಈ ವೇಳೆ ಭಕ್ತಾದಿಗಳಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿಲ್ಲದ ಕಾರಣಕ್ಕಾಗಿ ಜನಸಾಮಾನ್ಯರು ಸನ್ನಿಧಿಗೆ ಆಗಮಿಸುತ್ತಿಲ್ಲ. ಪರಿಣಾಮ ಹುಂಡಿ ಆದಾಯದಲ್ಲಿ ಬಹು ವರ್ಷಗಳ ಬಳಿಕ ದಾಖಲೆ ಪ್ರಮಾಣದ ಇಳಿಕೆ ಆಗಿದೆ.
SCROLL FOR NEXT