ದೇಶ

ಸ್ವಚ್ಛತಾ ಪ್ರಜ್ಞೆ ಶೂನ್ಯ: ಸ್ವಾತಂತ್ರ್ಯ ಸಂಭ್ರಮದ ನಂತರ ಕೆಂಪು ಕೋಟೆ ತುಂಬೆಲ್ಲಾ ಪ್ಲ್ಯಾಸ್ಟಿಕ್ ಬಾಟಲ್, ಕಸ!

Srinivas Rao BV
ನವದೆಹಲಿ: ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 4 ವರ್ಷಗಳೇ ಕಳೆದರೂ ಸಹ ದೇಶದ ಜನತೆಯಲ್ಲು ಸ್ವಚ್ಛತಾ ಪ್ರಜ್ಞೆ  ಈ ಹಿಂದೆ ಇದ್ದಷ್ಟೇ ಇದೆ ಎಂಬುದನ್ನು ಆ.15 ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸ್ಪಷ್ಟವಾಗಿ ತೋರಿಸಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳುವುದಕ್ಕಾಗಿ ಕೆಂಪು ಕೋಟೆಗೆ ತೆರಳಿದ್ದವರು ಕುಳಿತಲ್ಲೇ ಪ್ಲ್ಯಾಸ್ಟಿಕ್ ಬಾಟಲ್ ಗಳು ಹಾಗೂ ಬಾಳೆಹಣ್ಣುಗಳ ಎಲೆ, ಕಸ ಎಸೆದು ತಮ್ಮ ಸ್ವಚ್ಛತಾ ಪ್ರಜ್ಞೆಯನ್ನು ಮೆರೆದಿದ್ದಾರೆ. ಧ್ವಜಾರೋಹಣ, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಜನರೆಲ್ಲಾ ಖಾಲಿಯಾದರಾದರೂ ಕೆಂಪು ಕೋಟೆ ಭರ್ತಿ ಕಸ, ಬಾಳೆ ಹಣ್ಣು ಸಿಪ್ಪೆ, ಪ್ಲಾಸ್ಟಿಕ್ ಬಾಟಲ್ ಗಳು ತುಂಬಿ, ಕಸದ ಬುಟ್ಟಿ ವ್ಯವಸ್ಥೆಯನ್ನೂ ಮಾಡಲಾಗಿರಲಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿತ್ತು. 
"ಇದ್ದ ಕೆಲವೇ ಕೆಲವು ತಾತ್ಕಾಲಿಕ ಕಸದಬುಟ್ಟಿಗಳೂ ಸಹ ತುಂಬಿ ತುಳುಕುತ್ತಿದ್ದ ಕಾರಣ ಮಕ್ಕಳು ಕಸವನ್ನು ಇದ್ದಲ್ಲಿಯೇ ಹಾಕಬೇಕಾಯಿತು. ಇಂತಹ ಮುಖ್ಯ ಕಾರ್ಯಕ್ರಮದಲ್ಲಿ ಸೂಕ್ತವಾದ ಕಸದಬುಟ್ಟಿ ವ್ಯವಸ್ಥೆಯೂ ಆಗದೇ ಇದ್ದದ್ದು ಅಚ್ಚರಿ ಮೂಡಿಸಿದೆ ಎಂದು ವಿದ್ಯಾರ್ಥಿಗಳನ್ನು ಕರೆತಂದಿದ್ದ ಶಿಕ್ಷಕಿ ನಮಿತಾ ಶ್ರೀವಾಸ್ತವ ಹೇಳಿದ್ದಾರೆ. 
ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಕೆಂಪು ಕೋಟೆ ತ್ಯಾಜ್ಯ ವಿಲೇವಾರಿ ಪ್ರದೇಶದ ರೀತಿಯಲ್ಲಿ ಕಾಣುತ್ತಿತ್ತು, ಕಸದಬುಟ್ಟಿ ವ್ಯವಸ್ಥೆಯಂತಹ ಕನಿಷ್ಠ ವ್ಯವಸ್ಥೆಯನ್ನೂ ಏಕೆ ಮಾಡಲಾಗಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ಮತ್ತೋರ್ವ ಶಿಕ್ಷಕಿ ರಶ್ಮಿ ಗುಹಾ ಹೇಳಿದ್ದಾರೆ. 
SCROLL FOR NEXT