ನವದೆಹಲಿ: ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಎಲ್ ಕೆ ಅಡ್ವಾಣಿ, ಪರ್ವೇಜ್ ಮುಷರಫ್, ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಮ್ಮ ಅಚ್ಚುಮೆಚ್ಚಿನ ನಾಯಕನ ನಿಧನಕ್ಕೆ ಭಾರತವೇ ದುಃಖಿಸುತ್ತದೆ. ಅವರ ನಿಧನ ಒಂದು ಯುಗದ ಅಂತ್ಯವನ್ನು ಗುರುತಿಸುತ್ತದೆ. ವಾಜಪೇಯಿ ಅವರು ದೇಶಕ್ಕಾಗಿ ದುಡಿದಿದ್ದರು. ಅಲ್ಲದೆ ದಶಕಗಳ ಕಾಲ ಭಾರತದ ಅಭಿವೃದ್ಧಿಗೆ ಶ್ರಮಿಸಿದ್ದರು. ವಾಜಪೇಯಿ ಅವರ ಅಗಲಿಕೆಗೆ ಕೋಟ್ಯಾಂತರ ಭಾರತೀಯರ ಕಣ್ಣೀರಿಗೆ ಕಾರಣವಾಗಿದೆ. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ನನ್ನ ನೋವುಗಳನ್ನು ವ್ಯಕ್ತಪಡಿಸಲು ಪದಗಳೇ ಇಲ್ಲ. ತುಂಬಾ ದುಃಖವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರು ಸಂತಾಪ ಸೂಚಿಸಿದ್ದಾರೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ವಾಜಪೇಯಿ ಓರ್ವ ಜಂಟಲ್ ಮನ್, ಅವರ ಅಗಲಿಕೆ ನೋವು ತಂದಿದೆ ಎಂದು ಹೇಳಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು ಭಾರತ ಇಂದು ಓರ್ವ ಶ್ರೇಷ್ಠ ಮಗನನ್ನು ಕಳೆದುಕೊಂಡಿದೆ. ವಾಜಪೇಯಿ ಅವರು ಲಕ್ಷಾಂತರ ಜನರಿಂದ ಪ್ರೀತಿ, ಗೌರವ ಗಳಿಸಿದ್ದರು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics