ದೇಶ

ಆಪ್ತ ಗೆಳೆಯ ಅಟಲ್ ಬಿಹಾರಿ ವಾಜಪೇಯಿಗೆ ಅಂತಿಮ ವಿದಾಯ ಹೇಳಿದ ಅಡ್ವಾಣಿ

Manjula VN
ನವದೆಹಲಿ: 65 ವರ್ಷಗಳ ಆಪ್ತ ಗೆಳೆಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಅಂತಿಮ ವಿದಾಯ ಹೇಳಿದರು. 
ಸಕಲ ಸರ್ಕಾರಿ ಗೌರವಗಳೊಂದಿಗೆ ವಾಜಪೇಯಿಯವರನ್ನು ಇಂದು ಬೆಳಿಗ್ಗೆ ರಾಜಧಾನಿ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಕರೆತರಾಗಿತ್ತು. 
ವಾಜಪೇಯಿಯವರ ಪಾರ್ಥೀವ ಶರೀರ ಬಿಜೆಪಿ ಕಚೇರಿಗೆ ಕರೆತಂದ ಬಳಿಕ ಬಿಜೆಪಿ ಹಿರಿಯ ನಾಯಕರು ಹಾಗೂ ಇತರೆ ಪ್ರಮುಖ ಗಣ್ಯಾತಿ ಗಣ್ಯರು ಅಂತಿನ ನಮನ ಸಲ್ಲಿಸಿದರು. 
ಬಳಿಕ ಪುತ್ರಿ ಪ್ರತಿಭಾ ಅಡ್ವಾಣಿ ಜೊತೆಗೆ ಆಗಮಿಸಿದ ಅಡ್ವಾಣಿಯವರು ಆಪ್ತ ಗೆಳೆಯನಿಗೆ ಅಂತಿಮ ವಿದಾಯ ಹೇಳಿದರು. 
ಅಟಲ್ ಬಿಹಾರಿ ವಾಜಪೇಯಿ ತಾವು ಒಳ್ಳೆಯ ಭಾಷಣಕಾರ ಅಷ್ಟೇ ಅಲ್ಲ, ಕ್ರಿಯಾಶೀಲ ಆಡಳಿತಗಾರ ಎಂದು ತೋರಿಸಿದ್ದು, ದೇಶದ ಮೊದಲ ಕಾಂಗ್ರೆಸ್ಸೇತರ ಸರ್ಕಾರದಲ್ಲಿ. 
ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಿದೇಶ ಮಂತ್ರಿಯಾಗಿ ಅಟಲ್ ಬಿಹಾರಿ ಮೂಡಿಸಿದ ಛಾಪು ಇಂದಿಗೂ ದಕ್ಷಿಣ ಏಷ್ಯಾ ಸಂಬಂಧಗಳ ದೃಷ್ಟಿಯಿಂದ ಮೇಲುಗಲ್ಲು. ಹಿಂದುತ್ವದ ಪಕ್ಷದಿಂದ ಬಂದಿರುವ ವ್ಯಕ್ತಿಯೇ ನಿಜವಾಗಿ ಪಾಕಿಸ್ತಾನದ ಜೊತೆಗಿನ ಸಂಬಂಧ ಸುಧಾರಿಸಬಲ್ಲ ಎಂದು ಇಸ್ಲಾಮಾಬಾದ್'ನಲ್ಲಿ ನೀಡಿದ ವಾಜಪೇಯಿ ಭಾಷಣ ಅವರ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿತ್ತು. 
ನ್ಯೂಯಾರ್ಕ್'ನಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು, ಉತ್ತರದ ರಾಜ್ಯಗಳಲ್ಲಿ ಅಟಲರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ದ್ವಿಸದಸ್ಯತ್ವದ ಕಾರಣದಿಂದ ಸರ್ಕಾರ 19 ತಿಂಗಳಲ್ಲೇ ಹೋಯಿತಾದರೂ ಆಗಿನ ಜನಸಂಘದ ನಾಯಕರಾಗಿದ್ದ ಅಟಲ್ ಹಾಗೂ ಅಡ್ವಾಣಿ ಅವರ ವಿಶ್ವಾಸಾರ್ಹತೆಯನ್ನು ಮುಗಿಲೆತ್ತರಕ್ಕೆ ಏರಿಸಿತು. ಬಹುತೇಕ ಕಾಂಗ್ರೆಸ್ ವಿರೋಧಿ ಪಕ್ಷಗಳ ರಾಜಕಾರಣ ಎಂದರೆ ಅಧಿಕಾರ ಮತ್ತು ಅದರ ಸುತ್ತ ಹೆಣೆಯುವ ತಂತ್ರ ಕುತಂತ್ರಗಳು ಎನ್ನುವ ಮಾತಿದ್ದ ಕಾಲದಲ್ಲಿ ಅಟಲ್-ಅಡ್ವಾಣಿ ಜೋಡಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಕೂಡ ಒಂದಾಗಿ ಕೆಲ ಮಾಡುವುದು ಹೇಗೆ ಎಂಬುದಕ್ಕೆ ಉದಾಹರಣೆಯಾಗಿದ್ದರು. 
SCROLL FOR NEXT